ಕೊಲ್ಲೂರು: ಮೂಕಾಂಬಿಕಾ ದೇಗುಲದ ರಥೋತ್ಸವವು ಮಾ. 22ರಂದು ಭಕ್ತರ ಸಮ್ಮುಖ ದಲ್ಲಿ ಸಂಭ್ರಮದಿಂದ ಜರುಗಿತು.
ದೇಗುಲದ ತಂತ್ರಿ ಹಾಗೂ ಅರ್ಚಕ ನಿತ್ಯಾನಂದ ಅಡಿಗ ಅವರ ನೇತೃತ್ವದಲ್ಲಿ ದೇಗುಲದ ಅರ್ಚಕರ ಸಹಯೋಗದಲ್ಲಿ ಮುಹೂರ್ತ ಬಲಿ ನಡೆಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಅನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬಿಸಿಲಿನ್ನೂ ಲೆಕ್ಕಿಸದೆ ಭಾರೀ ತಾಪಮಾನ ದಿಂದ ಬಸವಳಿದ ಭಕ್ತರಿಗೆ ಕುಡಿಯುವ ನೀರು ಸಹಿತ ತಂಪು ಪಾನೀಯ ವ್ಯವಸ್ಥೆಗೊಳಿಸಲಾಗಿತ್ತು. ದಣಿವಾರಿಸಲು ಭಕ್ತರಿಗೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತಕುಮಾರ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಉಪಕಮಿಷನರ್ ತಹಶೀಲ್ದಾರ, ಗ್ರಾಪಂ ಅಧ್ಯಕ್ಷೆ ಪ್ರಸನ್ನಶರ್ಮಾ, ಸಮಿತಿ ಸದಸ್ಯ ರಾಜೇಶ ಕಾರಂತ ಉಪ್ಪಿನಕುದ್ರು, ದೇವಾಡಿಗ ಆಲೂರು, ಸುರೇಂದ್ರಶೆಟ್ಟಿ ಅಂಕದಕಟ್ಟೆ ಮಹಾಲಿಂಗನಾಯ್ ಧನಾಕ್ಷಿ, ಸುಧಾ ಕೆ, ಅಭಿಲಾಷ್ ಪಿ.ವಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಕೃಷ್ಣಮೂರ್ತಿ ಮಂಜರು, ಮಾಜಿ ಧರ್ಮದರ್ಶಿ ರಮೇಶ ಗಾಣಿಗ ಕೊಲ್ಲೂರು, ಕೃಷ್ಣಪ್ರಸಾದ್ ಅಡ್ಯಂತಾಯ, ವಂಡಬಳ್ಳಿ ಜಯರಾಮ ಶೆಟ್ಟಿ ಸೇರಿದಂತೆ ಹಲವರು ಇದ್ದರು.