ಬೆಂಗಳೂರು : ಕಳೆದ ತಿಂಗಳಾಂತ್ಯಕ್ಕೆ ಆರಂಭವಾದ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ. ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಎಲ್‌ಪಿಜಿ ಅಭಾವವು ಇದೀಗ ರಾಜ್ಯಕ್ಕೂ ತಟ್ಟಿದೆ.
ಕೆಲವು ಹೋಟೆಲ್‌ಗಳು ಬಂದ್ ಆಗುವ ಭೀತಿ ಎದುರಿಸುತ್ತಿದ್ದರೆ, ಇನ್ನು ಕೆಲವು ಕಡೆ ವೆರೈಟಿ ಮೆನುಗೆ ಕತ್ತರಿ ಹಾಕಿ ಕೆಲವೇ ಕೆಲವು ಐಟಂಗಳನ್ನಷ್ಟೇ ನೀಡಲಾಗುತ್ತಿದೆ. ಹೋಟೆಲ್ ಜತೆ ಬಡವರ ಬಂಧು ಎನಿಸಿಕೊಂಡಿರುವ ಇಂದಿರಾ ಕ್ಯಾಂಟೀನ್ ಕೂಡ ಸಂಕಷ್ಟ ಎದುರಿಸುತ್ತಿದೆ.

ಗ್ಯಾಸ್ ಸಿಲಿಂಡರ್‌ಗಳ ಅಲಭ್ಯತೆ ಹಿನ್ನೆಲೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಗುತ್ತಿಗೆ ಕಂಪನಿಗಳು ಜಿಬಿಗೆ ಪತ್ರ ಬರೆದಿದೆ. ಆಹಾರ ತಯಾರಿಕೆಗೆ ಗ್ಯಾಸ್ ಕೊರತೆ ಆಗುತ್ತಿದೆ, ಹೀಗಾಗಿ ಕೂಡಲೇ ಮಧ್ಯ ಪ್ರವೇಶಿಸಿ ಕ್ಯಾಂಟೀನ್‌ಗೆ ಆಹಾರ ಪೂರೈಸಲು ಅಗತ್ಯ ಕ್ರಮವಹಿಸುವಂತೆ ಮನವಿ ಮಾಡಿದೆ.
ಸಮರ್ಪಕವಾಗಿ ಆಹಾರ ತಯಾರು ಆಗದ ಹಿನ್ನೆಲೆ ಪೂರೈಕೆಯಲ್ಲೂ ವಿಳಂಬ ಆಗ್ತಿದೆ, ಸಮಸ್ಯೆ ಹೀಗೆ ಮುಂದುವರೆದ ಆಹಾರ ಪೂರೈಕೆ ಕಷ್ಟ ಎಂದು ಗುತ್ತಿಗೆ ಕಂಪನಿ ರಿವಾರ್ಡ್ಸ್ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ : ತೈಲ, LPG ಬಿಕ್ಕಟ್ಟಿನ ಬಿಸಿ IPL ಟೂರ್ನಿಗೆ ತಟ್ಟುವ ಸಾಧ್ಯತೆ ಕ್ಷೀಣ – ಪರಿಸ್ಥಿತಿ ನಿಭಾಯಿಸಲು ಬಿಸಿಸಿಐ ಸಜ್ಜು!



















