ಬೆಂಗಳೂರು: ರಾಜ್ಯದಲ್ಲಿ ಚಳಿಗಾಲದ ಸಂದರ್ಭದಲ್ಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಮೈ ಸುಡುವ ಬಿಸಿಲು ಆರಂಭವಾಗಿದೆ. ಹೀಗಾಗಿ ಜನರ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದೆ.
ರಾಜ್ಯದಲ್ಲಿ ಫೆಬ್ರವರಿ ತಿಂಗಳಲ್ಲೇ 30 ಡಿಗ್ರಿಗೂ ಅಧಿಕ ಉಷ್ಣಾಂಶ(high temperature) ದಾಖಲಾಗಿದೆ. ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ 25 ರಿಂದ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತದೆ. ಕಳೆದ ಒಂದು ವಾರದಿಂದ 30 ಡಿಗ್ರಿ ಆಸುಪಾಸಿನಲ್ಲಿ ಉಷ್ಣಾಂಶವಿತ್ತು. ಈಗ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉಷ್ಣಾಂಶದಲ್ಲಿ ಏರಿಕೆಯಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ 32 ರಿಂದ 34ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಗಡಿ ದಾಟಿದೆ. ಬೆಂಗಳೂರು (bengalore)ಗರಿಷ್ಠ ಉಷ್ಣಾಂಶ 32.5 ಡಿ.ಸೆ, ಕನಿಷ್ಠ ಉಷ್ಣಾಂಶ 16.7 ಡಿ.ಸೆ ದಾಖಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗರಿಷ್ಠ ಉಷ್ಣಾಂಶ 32.9 ಡಿ.ಸೆ, ಕನಿಷ್ಠ ಉಷ್ಣಾಂಶ 16.0 ಡಿ.ಸೆ, HAL ಏರ್ ಪೋರ್ಟ್ ಗರಿಷ್ಠ ಉಷ್ಣಾಂಶ 31.5 ಡಿ.ಸೆ, ಕನಿಷ್ಠ ಉಷ್ಣಾಂಶ16.0 ಡಿ.ಸೆ ದಾಖಲಾಗಿದೆ.