ಬೆಂಗಳೂರು: ಮದುವೆ ದಿನವೇ ವರ ಮಹಾಶಯ ಕುಡಿದು ಬಂದಿರುವ ಘಟನೆಯೊಂದು ವರದಿಯಾಗಿದೆ.
ಈ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು, ವರನ ವರ್ತನೆಯಿಂದಾಗಿ ಮದುವೆಯೇ ಕ್ಯಾನ್ಸಲ್ ಆಗಿದೆ. ಮದುವೆ ಸಂಭ್ರಮದಲ್ಲಿದ್ದ ವರನು ತನ್ನ ಸ್ನೇಹಿತರೊಂದಿಗೆ ಕಂಠಪೂರ್ತಿ ಕುಡಿದು ಬಿಟ್ಟಿದ್ದಾನೆ. ಆನಂತರ ಸೀದಾ ಮದುವೆಯ ಶಾಸ್ತ್ರಕ್ಕೆಂದು ಬಂದಿದ್ದಾನೆ. ಆದರೆ, ಅಲ್ಲಿ ಸುಮ್ಮನಿರದ ಆತ ಹುಚ್ಚನಂತೆ ವರ್ತಿಸಿದ್ದಾನೆ.
ಇದನ್ನು ಕಂಡ ವಧು ಕೆಂಡಾಮಂಡಲವಾಗಿ ಕೂಡಲೇ ಎದ್ದು ನಿಂತು ಮದುವೆಗೆ ಬಂದ ಅತಿಥಿಗಳಿಗೆ ಕ್ಷಮೆಯಾಚಿಸಿದ್ದಾರೆ. “ನಿಮ್ಮೆಲ್ಲರಿಗೂ ನಾನು ಕ್ಷಮೆ ಕೇಳುತ್ತೇನೆ. ನಾನು ಈ ಮದುವೆ ಆಗುತ್ತಿಲ್ಲ” ಎಂದು ಹೇಳಿದ್ದಾರೆ. ಆನಂತರ ವರನ ಕಡೆಯವರು ಕೂತು ಸಮಸ್ಯೆ ಬಗೆಹರಿಸಲು ಯತ್ನಿಸಿದ್ದಾರೆ. ಆದರೆ, ವಧು ಹಾಗೂ ಅವರ ಕುಟುಂಬಸ್ಥರು ಮಾತ್ರ ಮದುವೆ ರದ್ದು ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.