ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಣ್ಣ ಸಣ್ಣ ಜಾತಿಗಳನ್ನು ಒಡೆದು, ಕ್ರಿಶ್ಚಿಯನ್ ಸಮುದಾಕ್ಕೆ ಸೇರಿಸಿ, ಹಿಂದೂಗಳಲ್ಲಿ ಬಹಳ ದೊಡ್ಡ ಗೊಂದಲ ಸೃಷ್ಟಿ ಮಾಡುತಿದ್ದಾರೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಪೂಜಾರಿ, ಕಾಂತರಾಜ ಆಯೋಗ ನೂರಾರು ಕೋಟಿ ಖರ್ಚು ಮಾಡಿದ್ದಾರೆ. ನೀವೇ ಮಾಡಿದ 150 ಕೋಟಿ ಆಯೋಗದ ವರದಿಯನ್ನು ಹೈಕಮಾಂಡ್ ಹೇಳಿದ ಕಾರಣಕ್ಕೆ ಮೂಲೆಗುಂಪು ಮಾಡಿದ್ದೀರಾ. ದಲಿತರು, ಹಿಂದುಳಿದವರು ಸೇರಿದಂತೆ ಕ್ರಿಶ್ಚಿಯನ್ನೀಕರಣ ಮಾಡಲು ಹೊರಟಿದ್ದೀರ. ಇದಕ್ಕೆ ನಿಮ್ಮ ಪಕ್ಷದಲ್ಲೂ ಕೂಡ ಸಹಮತ ಇಲ್ಲ. ಕೇಂದ್ರ ಸರ್ಕಾರ ಜಾತಿಗಣತಿ ಮಾಡುವುದಾಗಿ ಹೇಳಿದೆ. ಆದರೆ ನೀವು ಮತಾಂತರ ಮಾಡಲು ಹೊರಟಿದ್ದೀರಾ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ ಸರ್ಕಾರ ಯಾವ ರೀತಿ ಕುಸಿದಿದೆ ಎಂದರೆ 8 ಲಕ್ಷ ಪಡಿತರ ರದ್ದು ಮಾಡಿ. ಬಿಪಿಎಲ್ ಕಾರ್ಡ್ ನ್ನು ಎಪಿಎಲ್ ಮಾಡಿದರೆ ಬಡವರ ಮಕ್ಕಳ ಶಿಕ್ಷಣಕ್ಕೆ ಅನಾನುಕೂಲ ಆಗಲಿದೆ. ಎಂದು ರೇಷನ್ ಕಾರ್ಡ್ ರದ್ದು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.



















