ಬೆಂಗಳೂರು: ಸರ್ಕಾರ ಪೋಷಕರ ಗೊಂದಲಕ್ಕೆ ಉತ್ತರ ನೀಡಿದ್ದು, ಸಿಹಿ ಸುದ್ದಿ ಕೊಟ್ಟಿದೆ.
ಇಲ್ಲಿಯವರೆಗೆ ಮೊದಲನೇ ತರಗತಿಗೆ ಮಗುವನ್ನು ಸೇರಿಸಬೇಕಾದರೆ 6 ವರ್ಷ ತುಂಬಿರಲೇಬೇಕೆಂಬ ನಿಯಮವಿತ್ತು. ಆದರೆ, ಈಗ ಈ ನಿಯಮವನ್ನು ಸರ್ಕಾರ ಸಡಿಲಿಸಿದೆ.
ರಾಜ್ಯ ಸರ್ಕಾರ 2025-26ಸಾಲಿನ ಶೈಕ್ಷಣಿಕ ವರ್ಷಕ್ಕೆ (2025-26 academic year) ಸಡಲಿಸಿ ಆದೇಶ ಹೊರಡಿಸಿದೆ. ಹೊಸ ನಿಯಮದಂತೆ ಐದೂವರೆ ವರ್ಷ ಪೂರ್ಣಗೊಂಡಿದ್ದರೆ, ಆ ಮಗುವನ್ನು ಮೊದಲನೇ ತರಗತಿಗೆ ಸೇರಿಸಬಹುದು. ಈ ಆದೇಶ ಪೋಷಕರ ಹಾಗೂ ಶಾಲೆಗಳ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.



















