ಬೆಂಗಳೂರು: ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಮತ್ತೊಮ್ಮೆ ಶಾಕ್ ಕೊಟ್ಟಿದೆ. ರಾಜ್ಯ ಸರ್ಕಾರ(State Govt) ಏಕಾಏಕಿ ಮದ್ಯದ ದರ ಏರಿಕೆ ಮಾಡಿದೆ.
ಸರ್ಕಾರವು ಬಿಯರ್ ಮೇಲಿನ ಸುಂಕದ ದರ ಹೆಚ್ಚಳ ಮಾಡಿದ್ದು, ಪರಿಣಾಮ 10 ರೂ. ನಿಂದ 45 ರೂ. ವರೆಗೂ ಮದ್ಯದ ಬೆಲೆ ಏರಿಕೆಯಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.
ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ (Imported goods) ಮೇಲಿನ ಬೆಲೆ ಏರಿಕೆ ಮಾಡಲಾಗಿತ್ತು. ಈಗ ಸುಂಕವನ್ನು ಹೆಚ್ಚಳ ಮಾಡಲಾಗಿದೆ. ಸುಂಕದ ಬೆಲೆ ಹೆಚ್ಚಳದಿಂದಾಗಿ Legend ಬಿಯರ್ ನ ಹಳೆಯ ದರ 100 ರೂ. ಆಗಿದ್ದರೆ, ಹೊಸ ದರ 145 ರೂ. ಆಗಿದೆ. Power cool – ಹಳೆಯ ದರ 130 ರೂ. ಆಗಿದ್ದರೆ, ಹೊಸ ದರ 155 ರೂ. ಆಗಿದೆ. Black fortನ ಹಳೆಯ ದರ 145 ರೂ. ಆಗಿದ್ದರೆ ಹೊಸ ದರ 160 ರೂ. ಆಗಿದೆ. Hunterನ ಹಳೆಯ ದರ 180 ರೂ. ಆಗಿದ್ದರೆ 190 ರೂ. ಗೆ ಏರಿಕೆಯಾಗಿದೆ. Woodpeacker crestನ ಹಳೆಯ ದರ 240 ರೂ ಆಗಿದ್ದರೆ, ಹೊಸ ದರ 250 ರೂ.ಗೆ ಏರಿಕೆಯಾಗಿದೆ. Woodpecker glideನ ಹಳೆಯ ದರ 230 ರೂ ಇತ್ತು. ಈಗ ಹೊಸ ದರ 240 ರೂ. ಗೆ ಏರಿಕೆಯಾಗಿದೆ.