ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ನಿಂದಾಗಿಯೇ ಜನರು ಹೈರಾಣಾಗಿ ಹೋಗಿದ್ದಾರೆ. ಈ ಮಧ್ಯೆ ಯಾವುದಾದರೂ ಕಾರಣಕ್ಕೆ ಕಾರು, ಬೈಕ್ ನಿಲ್ಲಿಸುವಂತಾದರಂತೂ ಜನ ಕಂಗಾಲಾಗಿ ಬಿಡುತ್ತಾರೆ. ಆದರೆ, ಇಲ್ಲೊಬ್ಬಳು ಹುಡುಗಿ ಸವಾರರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತಿದ್ದಾಳೆ.
ಮಾನಸಿಕ ಅಸ್ವಸ್ಥ (Mentally ill) ಹುಡುಗಿ ಪ್ರತ್ಯಕ್ಷವಾಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದ್ದಾಳೆ. ಈ ಕುರಿತು ವಿಡಿಯೋ (Video)ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ (Viral News). ಕಾರಿನ ಮುಂದೆ ಬಿದ್ದು ಭಯಗೊಳ್ಳುವಂತೆ ಮಾಡುವ ಈ ಹುಡುಗಿ ಕಾರಿನ ಬಾನೆಟ್ ಮೇಲೆ ನಿಂತು ಸುಮ್ಮನೆ ಏನೇನೋ ಬಡಬಡಿಸುತ್ತಾಳೆ. ನಂತರ ಕೆಟ್ಟದಾಗಿ ನೋಡಿ, ಅಲ್ಲಿಂದ ಹೋಗುತ್ತಾಳೆ.
ಬೆಂಗಳೂರಿನ ಬಿಷಪ್ ಕಾಟನ್ ಜಂಕ್ಷನ್ ಹತ್ತಿರ ಈ ಘಟನೆ ನಡೆದಿದ್ದು, ಅನೇಕರು ಭಯಭೀತರಾಗಿದ್ದಾರೆ. ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡು ಹೋಗುವ ಯುವತಿಯ ವಿಡಿಯೋ ಕಾರಿನ ಡ್ಯಾಷ್ ಕ್ಯಾಮ್ ನಲ್ಲಿ ಸೆರೆಯಾಗಿದೆ.
ಕಾರಿನ ಮುಂದೆ ಬಂದು ಕಾರಿನ ಬಾನೆಟ್ ಮೇಲೆ ಕುಳಿತು ತನ್ನಷ್ಟಕ್ಕೆ ತಾನು ಮಾತನಾಡುತ್ತಾಳೆ. ಪೊಲೀಸರು ಕೂಡಲೇ ಈ ಹುಡುಗಿಯನ್ನು ವಶಕ್ಕೆ ಪಡೆದು, ಮಾನಸಿಕ ಆಸ್ಪತ್ರೆಗೆ ದಾಖಲಿಸಬೇಕು. ಇಲ್ಲವಾದರೆ, ಜನರು ಭಯದಿಂದ ಓಡಾಡುವಂತಾಗಿದೆ. ಮಹಿಳೆಯರು, ಮಕ್ಕಳು ಬೆಚ್ಚಿ ಬಿದ್ದು ಏನಾದರೂ ಅನಾಹುತ ನಡೆದರೆ ಏನು ಗತಿ ಎಂದು ಜನ ಮನವಿ ಮಾಡುತ್ತಿದ್ದಾರೆ.