ಚಾಮರಾಜನಗರ : ಚಾಮರಾಜನಗರ ತಾಲೂಕಿನ ನಂಜೆದೇವಪುರ ಗ್ರಾಮದ ಬಳಿ ಬರೋಬ್ಬರಿ ಐದು ಹುಲಿಗಳು ಒಟ್ಟಿಗೆ ಪ್ರತ್ಯಕ್ಷವಾಗಿದ್ದವು. ಈ ಹಿನ್ನಲೆ ಹುಲಿಗಳ ಸೆರೆಗಾಗಿ ಅರಣ್ಯ ಇಲಾಖೆಯೂ ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ಮುಂದಾಗಿದೆ.

ಹುಲಿ ಸಂಚಾರದ ದೃಶ್ಯ ಸಿಸಿ ಕ್ಯಾಮೆರಾ ದಲ್ಲಿ ಸೆರೆಯಾಗಿದ್ದು, ಜಮೀನಿನ ದಾರಿಯಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಹುಲಿಯ ಪಗ್ ಮಾರ್ಕ್ ಕಂಡು ಗ್ರಾಮಸ್ಥರನ್ನು ಭಯ ಬೀಳಿಸಿದೆ. ಈಗಾಗಲೇ ಮೂರು ಹಳ್ಳಿಯ ರೈತರಿಗೆ ಜಮೀನಿನತ್ತ ಹೋಗದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಹಿಂದೆ ಡ್ರೋನ್‌ನಲ್ಲಿ 5 ಹುಲಿಗಳು ಓಡಾಟ ನಡೆಸುತ್ತಿರುವ ದೃಶ್ಯ ಸೆರೆಯಾಗಿತ್ತು. ಹೀಗಾಗಿ ಸಾಕಾನೆ ಬಳಸಿ ಕೂಂಬಿಂಗ್‌ಗೆ ಅರಣ್ಯ ಇಲಾಖೆ ಹುಲಿ ಸೆರೆಗೆ ಮುಂದಾಗಿದೆ. ನಿಂತು ಹೋದ ಕ್ವಾರಿಗಳನ್ನೇ ಟೈಗರ್ ಆವಾಸ ಸ್ಥಾನ ಮಾಡಿಕೊಂಡಿದ್ದು, ಹುಲಿಗಳನ್ನ ಡ್ರೈವ್ ಮಾಡೋದು ಬೇಡ ಸೆರೆಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಚಾ.ನಗರದಲ್ಲಿ 5 ಹುಲಿಗಳು ಓಡಾಟ | ನಿಷೇಧಾಜ್ಞೆ ಜಾರಿ, ಸ್ಥಳೀಯರಲ್ಲಿ ಹೆಚ್ಚಿದ ಆತಂಕ



















