ವೀಕ್ಷಕರೇ, ಕರ್ನಾಟಕ ನ್ಯೂಸ್ ಬೀಟ್ ನಲ್ಲಿ ನಾವು ಇವತ್ತು ಹೇಳಲು ಹೊರಟಿರೋದು ಕೋನಾರ್ಕ್ ನಲ್ಲಿರೋ ಸೂರ್ಯ ದೇವಾಲಯದ ಬಗ್ಗೆ, ಅದರಲ್ಲೂ ವಿಶೇಷವಾಗಿ ಧರ್ಮಪಾದನೆಂಬ ತ್ಯಾಗ ಮೂರ್ತಿಯ ಬಗ್ಗೆ, ತಮ್ಮವರ ಪ್ರಾಣ ಉಳಿಸುವ ಸಲುವಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಪರೋಪಕಾರಿಯ ಬಗ್ಗೆ. ಅಸಲಿಗೆ ಕೋನಾರ್ಕ್ ದೇವಾಲಯ ಇರೋದು ಓರಿಸ್ಸಾದಲ್ಲಿ. ಸೂರ್ಯ ದೇವನಿಗೆ ಸಮರ್ಪಿತವಾದ ಈ ಮಂದಿರವನ್ನು, ಸೂರ್ಯನು ಏಳು ಕುದುರೆ ಇರುವ ರಥವನ್ನು ಏರಿ ಬರುತ್ತಿರುವ ಹಾಗೇ ಕೆತ್ತಲಾಗಿದೆ. ದೇವಸ್ಥಾನದ ಎರಡೂ ಕಡೆ ಹನ್ನೆರಡು ಕಲ್ಲಿನ ಚಕ್ರಗಳನ್ನು ಕೆತ್ತಲಾಗಿದೆ. ಈ ಹನ್ನೆರಡು ಚಕ್ರಗಳು ಹನ್ನೆರಡು ತಿಂಗಳನ್ನು ಪ್ರತಿನಿಧಿಸುತ್ತವೆ ಎಂಬ ನಂಬಿಕೆ ಇದೆ.
ಈ ದೇವಸ್ಥಾನದ ವಿಶೇಷತೆ ಅಂದ್ರೆ, ಸೂರ್ಯ ಉದಯವಾದಾಗ ಮೊದಲನೇ ಕಿರಣವು ಈ ದೇವಸ್ಥಾನದ ಮುಖ್ಯ ದ್ವಾರದ ಮೇಲೆ ಬೀಳುವಂತೆ ಕೆತ್ತಲಾಗಿದೆ. ವಿಚಿತ್ರ ಅಂದ್ರೆ ಈ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿಲ್ಲ. ಈ ಸುಂದರ ಹಾಗೂ ಅಚ್ಚರಿ ಮಂದಿರ ಇದೀಗ ಪಾಳು ಬಿದ್ದ ಮಂದಿರವಾಗಿ ಬಿಟ್ಟಿದೆ. ದೇವಸ್ಥಾನದ ಪ್ರವೇಶ ದ್ವಾರವನ್ನು ೧೨೦ ವರ್ಷಗಳ ಹಿಂದೆಯೇ ಮುಚ್ಚಲಾಗಿದೆಯಂತೆ. ಸೋ ಹೀಗಾಗಿ ಇದೊಂದು ಪ್ರವಾಸಿ ತಾಣವಾಗಿಯಷ್ಟೇ ಉಳಿದು ಬಿಟ್ಟಿದೆ. ಇದಕ್ಕೆ ಧಾರ್ಮಿಕ ಕ್ಷೇತ್ರ ಅಂತ ಹೇಳಲು ಆಗುವುದಿಲ್ಲ. ಈ ದೇವಸ್ಥಾನದಲ್ಲಿರೋ ಸೂರ್ಯನ ಮೂರ್ತಿಯನ್ನ ಯಾವ ರೀತಿ ನಿರ್ಮಿಸಲಾಗಿತ್ತು ಅಂದ್ರೆ, ಅದು ನೆಲದಲ್ಲಿ ಪ್ರತಿಷ್ಟಾಪನೆ ಆಗದೇ ಗಾಳಿಯಲ್ಲಿ ತೇಲುವಂತಿತ್ತು. ಇದಕ್ಕೆ ಕೆಲವರು ಹೇಳೋ ಪ್ರಕಾರ, ದೇವಸ್ಥಾನದ ಮೇಲೆ ಒಂದು ಬೃಹತ್ತ ಅಯಸ್ಕಾಂತದ ಕಲ್ಲನ್ನು ಇಟ್ಟಿದ್ದರಿಂದ ಸೂರ್ಯನ ಲೋಹದ ಮೂರ್ತಿ ಸದಾ ತೇಲುತ್ತಿತ್ತು ಎನ್ನಲಾಗಿದೆ.
ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಅಂದ್ರೆ ಈ ದೇವಸ್ಥಾನದಲ್ಲಿ ಸದ್ಯ ಸೂರ್ಯನ ಮೂರ್ತಿ ಇಲ್ಲ. ಕೆಲವರು ಹೇಳೋ ಪ್ರಕಾರ ಸೂರ್ಯನ ಮೂರ್ತಿಯನ್ನ ಪುರಿ ಜಗನ್ನಾಥ ದೇವಾಲಯದಲ್ಲಿ ಇಡಲಾಗಿದೆಯಂತಲೂ ಹೇಳುತ್ತಾರೆ. ಇನ್ನು ಕೆಲವರು ದೆಹಲಿಯ ಮ್ಯೂಸಿಯಂವೊಂದರಲ್ಲಿ ಇಡಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಇದ್ಯಾವುದು ಕೂಡ ಖಚಿತವಾಗಿಲ್ಲ. ಸದ್ಯ ಕೋರ್ನಾರ್ಕ್ ನಲ್ಲಿ ಪ್ರವಾಸಿಗರಿಗೆ ಒಂದೇ ಮಂದಿರ ಕಾಣಿಸುತ್ತದೆ. ಆದರೆ ಅಸಲಿಗೆ ಇಲ್ಲಿ ಮೊದಲಿಗೆ ಮೂರು ದೇವಾಲಯಗಳು ಇದ್ವಂತೆ. ಕಾಲ ಕ್ರಮೇಣ ಎರಡು ಮಂಟಪಗಳು ಕುಸಿದು ಬಿದ್ದಿವೆ ಅಂತ ಕೆಲವರು ಹೆಳಿದ್ರೆ, ಇನ್ನು ಕೆಲವರು ಹೇಳೋ ಪ್ರಕಾರ ಈ ದೇವಸ್ಥಾನ ಯಾವತ್ತೂ ಪೂರ್ತಿ ಆಗಿಯೇ ಇಲ್ವಂತೆ. ಸದ್ಯ ಕಾಣುವ ಒಂದು ದೇವಸ್ಥಾನ ಇನ್ನು ಎತ್ತರವಾಗಿತ್ತಂತೆ. ೭೦೦ ವರ್ಷಗಳ ಹಿಂದೆ ನಿರ್ಮಿಸಲಾದ ಈ ದೇವಾಲಯ ಹೀಗೆ ನಶಿಸಿ ಹೋಗುವುದಕ್ಕೆ ಕಾರಣವೇನು ಅನ್ನೋದನ್ನ ತಜ್ಞರು ಪತ್ತೆ ಹಚ್ಚುತ್ತಿದ್ದಾರೆ. ಅಷ್ಟಕ್ಕೂ ಈ ದೇವಾಲಯವನ್ನು ಯಾತಕ್ಕಾಗಿ ನಿರ್ಮಿಸಲಾಗಿತ್ತು ಅನ್ನೋದಕ್ಕೆ ಒಂದು ಇಂಟ್ರೆಸ್ಟಿಂಗ್ ಕಥೆ ಇದೆ.
ಆ ಕಾಲದ ಶಿಲ್ಪಿ ಬಿಶು ಮಹಾರಾಣನಿಗೆ ಈ ದೇವಾಲಯವನ್ನು ನಿರ್ಮಾಣ ಮಾಡಲು ರಾಜ ನರಸಿಂಹ ದೇವನು ತಿಳಿಸಿದ್ದನಂತೆ. ಈ ದೇವಾಲಯ ನಿರ್ಮಿಸಲು ಬರೋಬ್ಬರಿ ೧೨ ಸಾವಿರ ಕೆಲಸಗಾರರು ಸತತ ೧೨ ತಿಂಗಳು ದುಡಿದಿದ್ದಾರೆ. ಒಂದು ವೇಳೆ ೧೨ ವರ್ಷಕ್ಕಿಂತ ಒಂದು ದಿನ ಹೆಚ್ಚಿಗೆಯಾದ್ರು ಕೂಡ ಎಲ್ಲ ಕೆಲಸಗಾರರನ್ನು ಕೊಲ್ಲಬೇಕು ಎಂದು ರಾಜ ಆಜ್ಞೆ ಮಾಡಿದ್ದನಂತೆ. ರಾಜನ ಅಪ್ಪಣೆಯಂತೆ ಬಿಶು ಮಹರಾಣ ಕೆಲಸಕ್ಕೆಂದು ಬಂದಿದ್ದ. ಆದರೆ,ಕೆಲಸ ನಡೆಯುತ್ತಿದ್ದ ಸಮಯದಲ್ಲಿ ರಾಜಾಜ್ಞೆ ಮನದಲ್ಲಿದ್ದ ಬಿಶು ಮಹಾರಾಣ ತನ್ನ ಮನೆ ಕಡೆ ಹೋಗಿಯೇ ಇರಲಿಲ್ಲ. ಇತ್ತ ತಂದೆಯನ್ನು ನೋಡದೇ ಇದ್ದ ಮಗ, ೧೨ ವರ್ಷಗಳ ನಂತರ ತನ್ನ ತಂದೆಯನ್ನು ನೋಡಲು ಹೋರಡುತ್ತಾನೆ. ದೇವಾಲಯ ನಿರ್ಮಾಣದ ಜಾಗಕ್ಕೆ ಬಂದು ತಂದೆಯನ್ನು ನೋಡುವಾಗ ಕೊಟ್ಟಿರುವ ಕಾಲ ಮಿತಿಯಲ್ಲಿ ಅದೇ ಕೊನೆ ದಿನವಾಗಿತ್ತು. ಆದರೆ ಇನ್ನು ಕೂಡ ದೇವಾಲಯದ ಕಳಶ ನಿರ್ಮಾಣವಾಗಿರಲಿಲ್ಲ.
ಒಂದೇ ದಿನದಲ್ಲಿ ಇಷ್ಟೊಂದು ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಎಲ್ಲರೂ ಚಿಂತೆ ಮಾಡುತ್ತಿರುವಾಗ ಬಿಶುವಿನ ಮಗ ಧರ್ಮಪಾದ ಬಂದು ನಾನು ಅದನ್ನು ಪೂರ್ತಿಗೊಳಿಸುತ್ತೇನೆಂದು ಕಾರ್ನಿರತನಾಗುತ್ತಾನೆ. ಕಳಶವನ್ನು ಒಂದೇ ರಾತ್ರಿಯಲ್ಲಿ ಕಂಪ್ಲೀಟ್ ಮಾಡೋ ನಿಟ್ಟಿನಲ್ಲಿ ಮಗ್ನನಾಗುತ್ತಾನೆ. ತಾನು ಕೊಟ್ಟ ಮಾತಿನ ಹಾಗೆ ಬೆಳಗಾಗೋದ್ರಲ್ಲಿ ಕಳಶ ಸ್ಥಾಪನೆ ಮಾಡಿ ಮೇಲಿಂದ ಜಿಗಿದು ತನ್ನ ಪ್ರಾಣ ಕಳೆದುಕೊಳ್ಳುತ್ತಾನೆ. ಅಷ್ಟಕ್ಕೂ ಆತ ಸಾಯಲು ಒಂದು ಕಾರಣವಿತ್ತು. ಉಳಿದ ಕೆಲಸಗಾರರು ರಾಜನ ಬಳಿ ಹೋಗಿ ಕೆಲಸ ಪೂರ್ಣಗೊಂಡಿಲ್ಲ ಅಂತ ಹೇಳಿರುತ್ತಾರೆ. ಎಲ್ಲಿ ತನ್ನ ನಿರ್ಧಾರದಿಂದ ೧೨ ಸಾವಿರ ಕೆಲ್ಸಗಾರರು ತಮ್ಮ ಜೀವವನ್ನು ಕಳೆದುಕೊಳ್ಳುತ್ತಾರೆ ಅನ್ನೋ ಕಾಳಜಿಯಿಂದ ಧರ್ಮಪಾದ ತಾನೇ ಮೇಲಿಂದ ಜಿಗಿದು ಸಾವನ್ನಪ್ಪುತ್ತಾನೆ. ಈಗಲೂ ಕೂಡ ಓರಿಸ್ಸಾದ ಜನರು ಧರ್ಮಪಾದನ ತ್ಯಾಗದ ಬಗ್ಗೆ ಮಾತನಾಡಿಕೊಳ್ಳುತ್ತಾರೆ.
ಹಲವಾರು ಬಾರಿ ಈ ದೇವಸ್ಥಾನದ ಬಾಗಿಲನ್ನು ತೆರೆಯುವ ಬಗ್ಗೆ ಚರ್ಚೆಗಳಾಗಿವೆ. ಆದ್ರೆ ಇಲ್ಲಿಯವೆಗೂ ಈ ಕೆಲಸ ಮಾತ್ರ ಯಾರೂ ಮಾಡಿಲ್ಲ.