ಉಡುಪಿ : ರಾಜ್ಯದ ಮೊದಲ ಸಿ ಆಂಬುಲೆನ್ಸ್ ಮುಂದಿನ ವರ್ಷ ಕರಾವಳಿಗೆ ಬಂದಿಳಿಯಲಿದೆ. ಸುಮಾರು 7.85 ಕೋಟಿ ರೂ ವೆಚ್ಚದಲ್ಲಿ 800ಎಚ್.ಪಿ ಸಾಮರ್ಥ್ಯದ ಆಂಬುಲೆನ್ಸ್ ಕರಾವಳಿಗೆ ಬರಲಿದೆ.
ಮೀನುಗಾರರ ಬೇಡಿಕೆಯಂತೆ ಇಲಾಖೆಯು ಸೀ ಆಂಬುಲೆನ್ಸ್ ತಯಾರಿಕೆಗೆ ಕಾರ್ಯಾದೇಶ ನೀಡಲಿದೆ ಎಂದಿದ್ದಾರೆ. ಸುಮಾರು ಏಳು ತಿಂಗಳ ಬಳಿಕ ಆಂಬುಲೆನ್ಸ್ ಸಿದ್ಧವಾಗಲಿದೆ. ಆಂಬುಲೆನ್ಸ್ ನಲ್ಲಿ 4 ಮಂದಿ ಅರೆವೈದ್ಯಕೀಯ ಸಿಬ್ಬಂದಿಗಳು, ನಾಲ್ಕೈದು ಹಾಸಿಗೆ, ಸ್ಟ್ರೆಚ್ಚರ್, ರೆಪ್ರಿಜಿರೇಟರ್, ಆಕ್ಸಿಜನ್ ಘಟಕ, ಶವಗಾರ ವ್ಯವಸ್ಥೆ ಇರಲಿದೆ ಎನ್ನಲಾಗಿದೆ.
ವೈದ್ಯಕೀಯ ಉಪಕರಣಗಳೊಂದಿಗೆ ಅಗ್ನಿಶಾಮಕ ವ್ಯವಸ್ಥೆ, 20 ಲೈಫ್ ಜಾಕೆಟ್ ಗಳು, ಜೀವರಕ್ಷಕ ಉಪಕರಣಗಳು, ಎರಡು ರಾಫ್ಟ್ ಗಳ ಸಹಿತ ಅಗತ್ಯ ಉಪಕರಣಗಳ ವ್ಯವಸ್ಥೆ ಮಾಡಲಾಗುತ್ತದೆ.
2023 ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಉಡುಪಿಯಲ್ಲಿ ಮಹಿಳೆಯೋರ್ವರು ಈ ಕುರಿತು ಮನವಿ ಮಾಡಿದ್ದರು. ಆ ವೇಳೆ ರಾಹುಲ್ ಗಾಂಧಿ ಆಂಬುಲೆನ್ಸ್ ನೀಡುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಸರ್ಕಾರ ಸಿ ಆಂಬುಲೆನ್ಸ್ ಕೊಡುಗೆಯಾಗಿ ನೀಡಲು ಮುಂದಾಗಿದೆ.



















