ಐಪಿಎಲ್ (IPL 2024) ಲೀಗ್ ನ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಸೆಣಸಾಟ ನಡೆಸಲಿವೆ.
ಈ ಪಂದ್ಯವು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಸಂಜೆ 7.30ಕ್ಕೆ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು 2ನೇ ಕ್ವಾಲಿಫೈಯರ್ ಗೆ ಪ್ರವೇಶ ಪಡೆಯಲಿದೆ. ಸೋತ ತಂಡವು ಐಪಿಎಲ್ ನಿಂದ ಹೊರ ಬೀಳಲಿದೆ. ಹೀಗಾಗಿ ಉಭಯ ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಆರ್ ಸಿಬಿ ಮತ್ತು ಆರ್ ಆರ್ ಇಲ್ಲಿಯವರೆಗೂ ಐಪಿಎಲ್ ನಲ್ಲಿ ಒಟ್ಟು 31 ಬಾರಿ ಸೆಣಸಾಟ ನಡೆಸಿವೆ. ರಾಜಸ್ಥಾನ್ ರಾಯಲ್ಸ್ ತಂಡ ಕೇವಲ 13ರಲ್ಲಿ ಗೆದ್ದಿದೆ. ಬೆಂಗಳೂರು ತಂಡ 15ರಲ್ಲಿ ಗೆಲುವು ಕಂಡಿದೆ. ಮೂರು ಪಂದ್ಯಗಳು ಫಲಿತಾಂಶ ನೀಡಿಲ್ಲ. ಬಲಾಬಲ ನೋಡಿದರೆ, ಆರ್ ಸಿಬಿ ಮುಂದೆ ಇದೆ. ಆದರೆ, ಈ ಬಾರಿಯ ಆರ್ ಆರ್ ತಂಡ ಬಲಿಷ್ಠವಾಗಿದ್ದರಿಂದ ಸುಲಭವಾಗಿ ತಿಳಿದುಕೊಳ್ಳುವಂತಿಲ್ಲ. 2015 ರಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 71 ರನ್ ಗಳಿಂದ ಸೋಲಿಸಿದ್ದ ಆರ್ ಸಿಬಿ 2ನೇ ಕ್ವಾಲಿಫೈಯರ್ ಗೆ ಪ್ರವೇಶಿಸಿತ್ತು. ಈ ಬಾರಿಯೂ ಅದೇ ನಿರೀಕ್ಷೆಯಲ್ಲಿ ಆರ್ ಸಿಬಿ ಹಾಗೂ ಅದರ ಫ್ಯಾನ್ಸ್ ಇದ್ದಾರೆ.