ಬೆಂಗಳೂರು: ಬಿಸಿಲಿಗೆ ರಾಜಧಾನಿಯಲ್ಲಿ ಜಲಕ್ಷಾಮದ ಭೀತಿ ಎದುರಾಗಿದ್ದು, ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.
ಅಂತರ್ಜಲ ಕೂಡ ಹೆಚ್ಚಾಗಿ ಕುಸಿಯುತ್ತಿದ್ದು, ಬೋರ್ ವೆಲ್ ಗಳು ಒಣಗಿ ವಾಟರ್ ಟ್ಯಾಂಕರ್ ಮೇಲೆ ಡಿಪೆಂಡ್ ಆಗುವ ಭಯ ಶುರುವಾಗಿದೆ. ಇದರ ಮಧ್ಯೆಯೇ ಬೇಸಿಗೆ ಕಾಲದಲ್ಲಿ ಟ್ಯಾಂಕರ್ ಮಾಫಿಯಾ ಆರಂಭವಾಗಿದ್ದು, ಅದಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಸಿದ್ಧತೆ ನಡೆಸಿದೆ.
ಕಳೆದ ವರ್ಷ ಟ್ಯಾಂಕರ್ ಮಾಲೀಕರು ನೀರಿನ ಹೆಸರಲ್ಲಿ ಹಣ ಲೂಟಿ ಮಾಡಿದ್ದರು. ಹೀಗಾಗಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಟ್ಯಾಂಕರ್ ನೀರಿಗೆ ಬೆಲೆ ನಿಗದಿ ಮಾಡಲು ಮುಂದಾಗಿದೆ. ಕಳೆದ ವರ್ಷ ಮಹದೇವಪುರ, ಮಾರತಹಳ್ಳಿ, ದೊಡ್ಡೇನಕುಂಡಿ, ಹೊರ ಮಾವು, ವರ್ತೂರು, ಬೊಮ್ಮನಹಳ್ಳಿ , ಆರ್ ಆರ್ ನಗರದಲ್ಲಿ ವಾಟರ್ ಟ್ಯಾಂಕರ್ ಮಾಫಿಯ ಲೂಟಿ ಮಾಡಿತ್ತು. ಟ್ಯಾಂಕರ್ ನೀರಿನ ಹೆಸರಿನಲ್ಲಿ ಜನರಿಂದ ಹಣ ಲೂಟಿ ಮಾಡಿದ್ದರು. ಹೀಗಾಗಿ ಈಗ ಟ್ಯಾಂಕರ್ ದರ ಫಿಕ್ಸ್ ಮಾಡಲು ಪಾಲಿಕೆ ಮುಂದಾಗಿದೆ.
ಈಗ ನಗರದಲ್ಲಿ ನೀರಿನ ಅಭಾವ ಇಲ್ಲ. ಒಂದು ವೇಳೆ ನೀರಿನ ಅಭಾವ ಉಂಟಾದರೆ, ಪಾಲಿಕೆ ನಿಗದಿ ಮಾಡುವ ದರದಂತೆಯೇ ನೀರು ಸರಬರಾಜು ಮಾಡಬೇಕು. ಹಿಂದಿನ ವರ್ಷವೂ ಟ್ಯಾಂಕರ್ ದರ ನಿಗದಿ ಮಾಡಲಾಗಿತ್ತು. ಆದರೆ, ಹಲವೆಡೆ ಅದನ್ನು ಗಾಳಿಗೆ ತೂರಿ ಟ್ಯಾಂಕರ್ ಮಾಲೀಕರು ದುಡ್ಡು ಕೊಳ್ಳೆ ಹೊಡೆದಿದ್ದರು. ಈ ವರ್ಷವೂ ದರ ನಿಗದಿ ಮಾಡಿ, ಕಣ್ಣಿಡಲು ಪಾಲಿಕೆ ಮುಂದಾಗಿದೆ.
ಟ್ಯಾಂಕರ್ ಗೆ ಯಾವ ದರ ನಿಗದಿ?
6 ಸಾವಿರ ಲೀಟರ್ ಟ್ಯಾಂಕರ್ಗೆ 600 ರೂ. ದರ ನಿಗದಿ. ಇದು 5 ಕಿ.ಮೀಟರ್ ಒಳಗೆ ಮಾತ್ರ
6 ಸಾವಿರ ಲೀಟರ್ ಟ್ಯಾಂಕರ್ ಗೆ 750 ರೂ. ದರ ನಿಗದಿ. 10.ಕಿ.ಮೀಟರ್ ವ್ಯಾಪ್ತಿಗೆ
8 ಸಾವಿರ ಲೀಟರ್ ಟ್ಯಾಂಕರ್ ಗೆ 700 ರೂ. ದರ ನಿಗದಿ. ಇದು 5 ಕಿ.ಮೀಟರ್ ಒಳಗೆ
8 ಸಾವಿರ ಲೀಟರ್ ಟ್ಯಾಂಕರ್ ಗೆ 850 ರೂ. ದರ ನಿಗದಿ. ಇದು 10 ಕಿ.ಮೀಟರ್ ವ್ಯಾಪ್ತಿಗೆ
1,200 ಲೀಟರ್ ಟ್ಯಾಂಕರ್ ಗೆ 1000 ರೂ. ದರ ನಿಗದಿ. ಇದು 5 ಕಿ.ಮೀಟರ್ ಒಳಗೆ
ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 510 ರೂ. 5 ಕಿ.ಮೀಟರ್ ಗೆ
10 ಕಿ.ಮೀಟರ್ ಹೋದರೆ 650 ರೂ. ನಿಗದಿ ಮಾಡಲಾಗುತ್ತಿದೆ ಎನ್ನಲಾಗಿದೆ.