ಮಾವನೊಬ್ಬ ಸೊಸೆಯ ಕಾಲು ನೋಡಿ ಮನೆಯಿಂದ ಹೊರ ಹಾಕಿರುವ ಘಟನೆ ನಡೆದಿದೆ.
ಮದುವೆಯಾಗಿ ಕೆಲವೇ ಗಂಟೆಗಳು ಮುಗಿದಿದ್ದವು. ಈ ವೇಳೆ ಮಾವ ಸೊಸೆಯ ಕಾಲು ನೋಡಿ, ಆಕೆಗೆ ಇಲ್ಲಿರಲು ಅವಕಾಶ ಇಲ್ಲ ಎಂದು ಹೊರ ಹಾಕಿದ್ದಾನೆ ಎನ್ನಲಾಗಿದೆ. ಆದರೆ, ಈ ಸುದ್ದಿ ಗೊತ್ತಾಗುತ್ತಿದ್ದಂತೆ ವಧುವಿನ ಅಜ್ಜ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಘಟನೆ ಆಗ್ರಾದಲ್ಲಿ ನಡೆದಿದೆ. ವಧು ಹಾಗೂ ವರನ ತಂದೆ ಇಬ್ಬರೂ ಕೂಡ ನಿವೃತ್ತ ಯೋಧರು. ಯುವತಿಯ ಕಾಲು ನೋಡಿ ಆಕೆ ಅಂಗವಿಕಲೆ, ನಮಗೆ ಆಕೆಯ ಕುಟುಂಬದವರು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಮಾವ, ನವ ವಧುವನ್ನು ಮನೆಯಿಂದ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಆದರೆ, ಯುವಕ ಯಾವುದೇ ಕೆಲಸದಲ್ಲಿರಲಿಲ್ಲ. ಯುವತಿಗೆ ನಡೆಯಲು ಕೂಡ ಯಾವುದೇ ತೊಂದರೆ ಇರಲಿಲ್ಲ. ಆದರೂ ಆಕೆಯನ್ನು ಮಾವ ಅಂಗವಿಕಲೆ ಎಂದು ಕರೆದಿದ್ದಾರೆ. ಯುವತಿಯಲ್ಲಿ ಯಾವುದೇ ದೋಷವಿಲ್ಲ ಎಂದು ಆಕೆ ಎಷ್ಟೇ ಹೇಳಿದರೂ ಆತ ಕೇಳಿಲ್ಲ. ಅತ್ತೆಯ ಮನೆಯವರು ಉದ್ದೇಶಪೂರ್ವಕವಾಗಿ ಹುಡುಗಿಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ವಧುವಿನ ಕುಟುಂಬಸ್ಥರು ಎಫ್ ಐಆರ್ ದಾಖಲಿಸಿದ್ದಾರೆ.