ಬಹುಭಾಷಾ ಹಿರಿಯ ನಟಿ ಬಿ. ಸರೋಜದೇವಿ ಅಸ್ತಂಗತರಾಗಿದ್ದಾರೆ. ಮಲ್ಲೇಶ್ವರಂನ ಮಣಿಪಾಲ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಲಲುತ್ತಿದ್ದರು. ಅವರನ್ನು ಮಲ್ಲೇಶ್ವರಂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಹಲೋಕ ತ್ಯಜಿಸಿದ್ದಾರೆ.
ಅವರು ಚಿತ್ರರಂಗಕ್ಕೆ ನೀಡಿದ ಸೇವೆಗಾಗಿ 2008ರಲ್ಲಿ ಭಾರತ ಸರ್ಕಾರಿಂದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿನ ಹಾಗೂ 1969ರಲ್ಲಿ ಭಾರತ ಸರ್ಕಾರದ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಹಾಗೂ 1992ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಲಭಿಸಿದ್ದವು.
ಅಭಿನಯ ಸರಸ್ವತಿ ಎಂದೇ ಹೆಸರು ಮಾಡಿದ್ದ ಸರೋಜದೇವಿ, ಜನನ 7 ಜನವರಿ 1938 ರಲ್ಲಿ ಜನಿಸಿದ್ದರು. ತಮ್ಮ 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 1955ರಲ್ಲಿ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಇನ್ನು, ಸರೋಜಾದೇವಿ ಅವರ ಅಭಿನಯದ ಮೊದಲ ಚಿತ್ರವೇ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿತ್ತು. 1955ರಲ್ಲಿ ಸರೋಜಾದೇವಿ ಶ್ರೀ ರಾಮ ಪೂಜೆ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಶ್ರೀರಾಮ ಪೂಜೆ ಚಿತ್ರಕ್ಕೂ ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು ವಿಶೇಷ.
ಭಾರತೀಯ ಚಿತ್ರರಂಗದಲ್ಲಿ ಮಿಂಚಿದ್ದ ಸರೋಜಾದೇವಿ. ಕನ್ಮಡ,ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು. ವರನಟ ಡಾ. ರಾಜ್ ಕುಮಾರ್ ಅವರ ಜೊತೆ ಬಬ್ರುವಾಹನ, ಭಾಗ್ಯವಂತರು, ತಂದೆ ಮಕ್ಕಳು ಚಿತ್ರಗಳು ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದರು.



















