ಕಾಂಗ್ರೆಸ್ ನಾಯಕರೊಬ್ಬರ ಇಡೀ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಛತ್ತೀಸ್ ಗಢ ರಾಜ್ಯದ ಕಾಂಗ್ರೆಸ್ ನಾಯಕ ಪಂಚ್ರಮ್ ಯಾದವ್ ಹಾಗೂ ಕುಟುಂಬ ಈ ರೀತಿ ದುರಂತ ಅಂತ್ಯ ಕಂಡಿದೆ ಎಂದು ತಿಳಿದು ಬಂದಿದೆ. ಮನೆಗೆ ಬೀಗ ಹಾಕಿ ವಿಷ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಛತ್ತೀಸ್ ಗಢದ ಜಂಜೀರ್ ಚಂಪಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಬೀಗ ಒಡದು ಪ್ರವೇಶಿಸಿದ ಸ್ಥಳೀಯರು ಅಸ್ವಸ್ಥರಾಗಿದ್ದ ನಾಯಕ ಕುಟುಂಬವನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
66 ವರ್ಷದ ಕಾಂಗ್ರೆಸ್ ನಾಯಕ ಪಂಚ್ರಮ್ ಯಾದವ್, ಪತ್ನಿ 55 ವರ್ಷದ ದಿನೇಶ ನಂದಿನಿ, ಪುತ್ರರಾದ 27 ವರ್ಷದ ಸೂರಜ್ ಹಾಗೂ 32 ವರ್ಷದ ನೀರಜ್ ಸಾವನ್ನಪ್ಪಿದ್ದಾರೆ. ಆಗಸ್ಟ್ 30 ರಂದು ಬೋಧ ತಲಬ್ ಪ್ರದೇಶದಲ್ಲಿರುವ ಮನೆಯಲ್ಲಿ ಹೊರಗಿನಿಂದ ಲಾಕ್ ಮಾಡಿ ವಿಷ ಕುಡಿದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯಿಂದಲೂ ಗೇಟು, ಬಾಗಿಲು ಲಾಕ್ ಮಾಡಿರುವುದನ್ನು ನೆರೆ ಮನೆಯವರು ನೋಡಿದ್ದಾರೆ. ಹೀಗಾಗಿ ಅವರಿಗೆ ಅನುಮಾನ ಮೂಡಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಒಳ ಪ್ರವೇಶಿಸಿದಾಗ ಎಲ್ಲರೂ ಅಸ್ವಸ್ಥರಾಗಿರುವುದು ಕಂಡು ಬಂದಿದೆ. ಕೂಡಲೇ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಸಾಲದಿಂದಾಗಿ ಈ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ.
ಪಂಚ್ರಮ್ ಯಾದವ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇದಕ್ಕಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಅವರ ಮಕ್ಕಳು ಫ್ಯಾಬ್ರಿಕೇಟ್ಸ್ ಉದ್ಯಮ ಆರಂಭಿಸಿದ್ದರು. ಆದರೆ ಹೂಡಿದ ಬಂಡವಾಳವೂ ನಷ್ಟವಾಗಿತ್ತು. ಹೀಗಾಗಿ ಇಡೀ ಕುಟುಂಬ ಸಾಲದ ಸುಳಿಗೆ ಸಿಲುಕಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.