ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಂದೀಪ್ ರೆಡ್ಡಿ ವಂಗ ಅಭಿಮಾನಿಗಳಿಗೆ ತುಂಬಾ ಒಳ್ಳೊಳ್ಳೆ ಸಿನಿಮಾಗಳನ್ನು ನೀಡುತ್ತಿದ್ದಾರೆ. ಅನಿಮಲ್ ಸಿನಿಮಾ ನಂತರ ಇದೀಗ ಸಂದೀಪ್ ರೆಡ್ಡಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಜೊತೆ ಕೈಜೊಡಿಸಿದ್ದಾರೆ.
ಹೌದು ಸ್ಪಿರಿಟ್ ಸಿನಿಮಾದ ಮಾತುಕತೆ ಹರಿದಾಡುತ್ತಿದೆ. ಈ ಸಿನಿಮಾದ ನಟಿ ಆಯ್ಕೆಗಾಗಿ ಸಿನಿ ತಂಡ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಈ ಚಿತ್ರಕ್ಕೆ ನಾಯಕಿ ಆಗಬೇಕಿತ್ತು. ಆದರೆ ಸಂಭಾವನೆ ವಿಚಾರವಾಗಿ ದೀಪಿಕಾ ಚಿತ್ರತಂಡದಿಂದ ಹೊರನಡೆದಿದ್ದಾರೆ.
ಈಗ ಅವರ ಜಾಗಕ್ಕೆ ನಟಿ ತೃಪ್ತಿ ದಿಮ್ರಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ವಿಷಯವನ್ನು ‘ಸ್ಪಿರಿಟ್’ ಸಿನಿಮಾ ತಂಡ ಅಧಿಕೃತವಾಗಿ ಘೋಷಿಸಿದೆ. ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಅವರಿಗೆ ಜೋಡಿಯಾಗಿ ತೃಪ್ತಿ ದಿಮ್ರಿ ಯಾವ ಪಾತ್ರದಲ್ಲಿ ಮಿಂಚಬಹುದು ಎಂಬುವುದು ಅಭಿಮಾನಿಗಳು ಕಾತುರ.