ಬೆಂಗಳೂರು: ಅತ್ತೆ ಕೊಲ್ಲುವುದಕ್ಕಾಗಿ ಸೊಸೆಯೊಬ್ಬಳು ವೈದ್ಯರ ಬಳಿ ಮಾತ್ರೆ ಕೇಳಿರುವ ವಿಷಯವೊಂದು ಬೆಳಕಿಗೆ ಬಂದಿದ್ದು, ವೈದ್ಯರು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ವೈದ್ಯರೊಬ್ಬರಿಗೆ ಈ ವಿಚಿತ್ರ ಸಂದೇಶ ಬಂದಿದೆ. ಇದು ಪ್ರಾಂಕ್ ಸಂದೇಶವೋ? ಅಥವಾ ಅಸಲಿ ಸಂದೇಶವೋ? ಗೊತ್ತಾಗಿಲ್ಲ.
ಡಾಕ್ಟರ್ ಗೆ ಮೆಸೆಜ್ ಮಾಡಿ ನನ್ನ ಅತ್ತೆ ಸಾಯಿಸಲು ಮಾತ್ರೆ ಬರೆದುಕೊಡಿ ಎಂದು ಮಹಿಳೆ ಕೇಳಿದ್ದಾಳೆ ಎನ್ನಲಾಗಿದೆ. ಮಹಿಳೆಯ ಮಾತು ಕೇಳಿ ಡಾಕ್ಟರ್ ಶಾಕ್ ಆಗಿದ್ದಾರೆ. ಈ ಸಂದೇಶ ಡಾ. ಸುನೀಲ್ ಕುಮಾರ್ ಎಂಬುವವರಿಗೆ ಬಂದಿದೆ.
ಈ ಕುರಿತು ಡಾ. ಸುನೀಲ್ ಕುಮಾರ್ ಅವರು ಸಂಜಯ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ಇನ್ಸ್ಟಾಗ್ರಾಂ ಮೂಲಕ ಡಾಕ್ಟರ್ ನಂಬರ್ ಪಡೆದಿದ್ದಾರೆ ಎನ್ನಲಾಗಿದೆ. ಮಂಗಳವಾರ ಸಂಜೆ ವಾಟ್ಸಾಪ್ ನಲ್ಲಿ ಡಾಕ್ಟರ್ ಗೆ ಮೆಸೆಜ್ ಮಾಡಿದ್ದಾರೆ. ನಮ್ಮ ಅತ್ತೆಗೆ ವಯಸ್ಸಾಗಿದೆ. ತುಂಬಾ ಹಿಂಸೆ ಕೊಡುತ್ತಾರೆ. ಏನಾದ್ರೂ ಹೇಳ್ತಿರಾ? ಹೇಗೆ ಸಾಯಿಸೋದು ಅಂತ. ಟ್ಯಾಬ್ಲೆಟ್ ಒಂದು..ಎರಡು ತೊಗೊಂಡ್ರೆ ಸಾಯ್ತರಲ್ಲ ಅದು ಹೇಳಿ ಎಂದು ಡಾಕ್ಟರ್ ಗೆ ವಾಟ್ಸಾಪ್ ನಲ್ಲಿ ಮಹಿಳೆ ಮೆಸೆಜ್ ಮಾಡಿದ್ದಾರೆ. ಆನಂತರ ಕೂಡಲೇ ಮಹಿಳೆ ಮೆಸೆಜ್ ಗಳನ್ನು ಡಿಲಿಟ್ ಮಾಡಿದ್ದು, ನಂಬರ್ ಬ್ಲಾಕ್ ಮಾಡಿದ್ದಾರೆ. ಈ ಕುರಿತು ವೈದ್ಯರು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.