ಬೆಂಗಳೂರು: ನಗರದಲ್ಲಿ ಶನಿವಾರ ನಡೆದ ‘ಮೊಳಕೆ’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ, ಸಾಹಿತ್ಯ ಸಂವಾದದ ಕುರಿತು ಮಾತನಾಡಿದ ಹಿರಿಯ ಸಾಹಿತಿ, ಲೇಖಕರಾದ ಪ್ರೋ. ಬರಗೂರು ರಾಮಚಂದ್ರಪ್ಪ “ಸಾಹಿತ್ಯ ವಲಯದಲ್ಲಿ ಸಂವಾದ ಸಂಸ್ಕೃತಿ ಕಡಿಮೆಗೊಳ್ಳುತ್ತಿರುವ ಬಗ್ಗೆ” ವಿಮರ್ಶಿಸಿದರು.
ಸಾಹಿತ್ಯ ಕೃಷಿಯಲ್ಲಿ ಸಿಡುಕುತನ, ಉದ್ಧಟತನ ಇಲ್ಲದಿದ್ದರೆ ಸೃಜನ ಸಾಹಿತ್ಯ ಮೊಳಕೆಯೊಡೆಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸಾಹಿತ್ಯವೇ ಹಾದಿ ತಪ್ಪುತ್ತದೆ. ಗುಣಮಟ್ಟದ ಸಾಹಿತ್ಯ ರಚನೆಯಾಗುವ ವಾತಾವರಣ ಇಂದು ಕಡಿಮೆಯಾಗುತ್ತಿದೆ ಜನಪರತೆಯ ಹಾದಿಯಲ್ಲಿ ಸಾಹಿತ್ಯ ಸಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಮಾತನಾಡಿ, ಇಂದು ಸತ್ಯದ ಹೆಸರಿನಲ್ಲಿ ಸುಳ್ಳುಗಳು ರಾರಾಜಿಸುತ್ತಿವೆ. ಸತ್ಯ ಅಸತ್ಯವಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಹಿರಿಯ ಪತ್ರಕರ್ತ ಅನಂತ ಚಿನಿವಾರ, ಶಿವಾನಂದ ತಗಡೂರು, ನಿವೃತ್ತ ಐಎಎಸ್ ಅಧಿಕಾರಿ ಜಿ.ಎನ್. ಶಿವಮೂರ್ತಿ, ಮೊಳಕೆ ಕೃತಿಯ ಕತೃ ತುರುವನೂರು ಮಂಜುನಾಥ್, ಹನುಮೇಶ್ ಯಾವಗಲ್ ಸೇರಿದಂತೆ ಹಲವರು ಇದ್ದರು.