ರಾಯಚೂರು: ವ್ಯಕ್ತಿಯನ್ನು ಪಾಪಿಗಳು 31 ಬಾರಿ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ನಗರದ ಬಂಗಿಕುಂಟದಲ್ಲಿ ಇತ್ತೀಚೆಗಷ್ಟೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಯ್ಯದ್ ಖದೀರ್(43) ಮೃತ ವ್ಯಕ್ತಿ. ಅನ್ವರ್ ಹಾಗೂ ತಪ್ಪಣ್ಣ ಎಂಬುವವರನ್ನು ಬಂಧಿಸಲಾಗಿದ್ದು, ಸದರ್ ಬಜಾರ್ ಠಾಣೆಯಲ್ಲಿ (police) ಪ್ರಕರಣ ದಾಖಲಾಗಿದೆ.
ರಾಯಚೂರು ನಗರದ ಬಂಗಿಕುಂಟ ಪ್ರದೇಶದಲ್ಲಿ ಸಯ್ಯದ್ ಖದೀರ್ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಘಟನೆಯಿಂದ ಇಡೀ ರಾಯಚೂರಿಗೆ ರಾಯಚೂರೇ ಬೆಚ್ಚಿಬಿದ್ದಿತ್ತು. ಬೈಕ್ನಲ್ಲಿ ಬಂದಿದ್ದ ಇಬ್ಬರು ರಕ್ಕಸರು ಸಯ್ಯದ್ ಖದೀರ್ನ ಮೇಲೆ ದಾಳಿ ನಡೆಸಿ ಅಟ್ಯಾಕ್ ಮಾಡಿ 31 ಬಾರಿ ಇರಿದು ಹತ್ಯೆಗೈದಿದ್ದಾರೆ. ಆನಂತರ ಆರೋಪಿಗಳು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.
ಅನ್ವರ್ ಹಾಗೂ ತಿಮ್ಮಪ್ಪ ಆರೋಪಿಗಳು. ಆದರೆ, ಸ್ನೇಹಿತರೇ ಸೇರಿಕೊಂಡು ಸಯ್ಯದ್ ಖದೀರ್ ನನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.