ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕುಟುಂಬ ಸಮೇತ ಅಸ್ಸಾಂ, ಮೇಘಾಲಯ ಪ್ರವಾಸಕ್ಕೆ ತೆರಳಿದ್ದಾರೆ.

ಇದೇ ವೇಳೆ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಕಾಜಿರಂಗ ಉದ್ಯಾನ ಹಾಗೂ ಹುಲಿ ಸಂರಕ್ಷಿತ ಅಭಯಾರಣ್ಯಕ್ಕೆ ಭೇಟಿ ನೀಡಿದ್ದಾರೆ. ಸಚಿನ್ ಗೆ ಪತ್ನಿ ಅಂಜಲಿ ಹಾಗೂ ಪುತ್ರಿ ಸಾರಾ ಸಾಥ್ ನೀಡಿದ್ದಾರೆ.

ಹುಲಿ ಮೀಸಲು ಪ್ರದೇಶಗಳಲ್ಲಿ ಸಚಿನ್ ಜೀಪ್ ಸಫಾರಿ ಮಾಡದರು. ಪಶ್ಚಿಮ ಬಾಗೋರಿ ಮತ್ತು ಕೇಂದ್ರ ಕೊಹೊರಾದ ಹುಲಿ ಮೀಸಲು ಪ್ರದೇಶದಲ್ಲಿ ರಾಯಲ್ ಬಂಗಾಳದ ಹುಲಿಗಳನ್ನು ವೀಕ್ಷಿಸಿದರು. ಅಷ್ಟೇ ಅಲ್ಲಾ ಇದೇ ವೇಳೆ ಅಭಯಾರಣ್ಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಸಚಿನ್ ಕುಟುಂಬ ಸಮಾಲೋಚನೆ ನಡೆಸಿತು.