ತಮಿಳುನಾಡು ಗಡಿಯಲ್ಲಿ ಒಂಟಿ ಸಲಗದ ಹಾವಳಿ ಜನರನ್ನು ಭಯಭೀತಗೊಳಿಸುತ್ತಿದೆ.
ತಮಿಳುನಾಡಿನ ಅವಳಕೊಟ್ಟೆ ಗ್ರಾಮದ ಬಳಿ ಒಂಟಿ ಸಲಗ ಪ್ರತ್ಯಕ್ಷವಾಗಿ ಕರುವನ್ನು ತುಳಿದು ಕೊಂದು ಹಾಕಿದೆ. ಅಲ್ಲದೇ, ಗ್ರಾಮದ ಹೊಲ, ಗದ್ದೆಗಳಲ್ಲಿ ಓಡಾಟ ನಡೆಸಿದೆ. ಇದನ್ನು ಕಂಡು ಜನರು ಭಯಭೀತರಾಗಿದ್ದಾರೆ.
ರೈತ ಮುತ್ತಪ್ಪ ಎಂಬುವವರಿಗೆ ಸೇರಿದ ಕರುವಿನ ಮೇಲೆ ಕಾಡಾನೆ ದಾಳಿ ನಡೆಸಿ ತುಳಿದು ಕೊಂದಿದೆ. ಇದನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಕಾಡಾನೆ ಕಂಡು ಸುತ್ತಮುತ್ತಲಿನ ಹಳ್ಳಿಗರು ಜಮಾಯಿಸಿದ್ದಾರೆ. ಆದರೂ ಬೆದರಿ ಕಾಡಿಗೆ ಆನೆ ಹೋಗಿಲ್ಲ. ಬದಲಾಗಿ ಗ್ರಾಮ ಹಾಗೂ ಹೊಲದಲ್ಲಿ ಸುತ್ತಾಡಿದೆ. ಕೂಡಲೇ ಕಾಡಾನೆಯನ್ನು ಕಾಡಿಗೆ ಅಟ್ಟಬೇಕೆಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.