ಬೆಂಗಳೂರು: ಸರ್ಕಾರಿ ಕಟ್ಟಡಗಳ ಬಾಕಿ ಅಸ್ತಿ ತೆರಿಗೆ ವಸೂಲಿ ಮಾಡಿ ಬಿಬಿಎಂಪಿ ಇತಿಹಾಸ ಬರೆದಿದೆ.
ಬರೋಬ್ಬರಿ 65 ಕೋಟಿ ರೂ. ಸರ್ಕಾರಿ ಕಟ್ಟಡಗಳ ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಲಾಗಿದೆ. ಕಳೆದ ಹತ್ತಾರೂ ವರ್ಷಗಳಿಂದ ಸರ್ಕಾರಿ ಇಲಾಖೆಗಳು ಬಾಕಿ ಅಸ್ತಿ ತೆರಿಗೆ ಪಾವತಿ ಮಾಡಿರಲ್ಲಿಲ್ಲ. ಕಳೆದ ಎರಡೆ ದಿನಕ್ಕೆ ಸರ್ಕಾರಿ ಕಚೇರಿಗಳಿಂದ 65 ಕೋಟಿ ರೂ. ಬಾಕಿ ತೆರಿಗೆ ವಸೂಲಿ ಮಾಡಲಾಗಿದೆ.
ಕಳೆದ ವರ್ಷ ಓಟಿಎಸ್ ಮೂಲಕ ತೆರಿಗೆ ಕಟ್ಟುವಂತೆ ವಿನಾಯಿತಿ ನೀಡಲಾಗಿತ್ತು. ಆದರೂ ಸರ್ಕಾರಿ ಕಟ್ಟಡ ನಿರ್ವಹಣೆಗಾರರು ಕ್ಯಾರೆ ಅಂದಿರಲಿಲ್ಲ. ಈಗ ಕಟ್ಟಡ ಹರಾಜು ಅಂದ ಕೂಡಲೇ ಸರ್ಕಾರಿ ಕಟ್ಟಡಗಳ ಬಾಕಿಯನ್ನು ಕಟ್ಟಲಾಗಿದೆ.
ಕಳೆದ ವಾರ ಸರ್ಕಾರಿ ಕಟ್ಟಡಗಳಿಗೆ ನೋಟೀಸ್ ನೀಡಿ ಬಿಬಿಎಂಪಿ ಅಧಿಕಾರಿಗಳು ವಾರ್ನಿಂಗ್ ನೀಡಿದ್ದರು. ಈಗ ಅಧಿಕಾರಿಗಳ ವಾರ್ನಿಂಗ್ ಗೆ ಬೆಚ್ಚಿಬಿದ್ದು ಸರ್ಕಾರಿ ಕಟ್ಟಡಗಳ ಇಲಾಖೆ ಮುಖ್ಯಸ್ಥರು ತೆರಿಗೆ ಕಟ್ಟಿದ್ದಾರೆ. ಮಾರ್ಚ್ 31 ರೊಳಗೆ ಬಾಕಿ ಅಸ್ತಿ ತೆರಿಗೆ ಪಾವತಿ ಮಾಡಿಲ್ಲ ಅಂದ್ರೆ ಕಟ್ಟಡ ಹರಾಜು ಅಂತ ನೋಟೀಸ್ ನೀಡಲಾಗಿತ್ತು.
ನೋಟೀಸ್ ಬರುತ್ತಿದಂತೆ ಮಾರ್ಚ್ 31ರಂದು ಬಾಕಿ ಅಸ್ತಿ ತೆರಿಗೆಯನ್ನು ಸರ್ಕಾರಿ ಕಟ್ಟಡಗಳು ಪಾವತಿ ಮಾಡಿವೆ. ಪ್ರಮುಖವಾಗಿ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸ ಸೌಧ, ರಾಜ ಭವನ ಸೇರಿದಂತೆ 30ಕ್ಕೂ ಅಧಿಕ ಸರ್ಕಾರಿ ಕಟ್ಟಡಗಳು ಬಾಕಿ ತೆರಿಗೆ ಪಾವತಿ ಮಾಡಿವೆ. ನಮ್ಮ ಮೆಟ್ರೋ ಹಾಗೂ ಇಸ್ರೋದಿಂದ ಅತ್ಯಧಿಕ ಬಾಕಿ ತೆರಿಗೆ ಪಾವತಿಯಾಗಿದೆ.
ಬಾಕಿ ಅಸ್ತಿ ತೆರಿಗೆ ಪಾವತಿ ಮಾಡಿದ ಸರ್ಕಾರಿ ಕಟ್ಟಡಗಳನ್ನು ನೋಡುವುದಾದರೆ..
- ನಮ್ಮ ಮೆಟ್ರೋ- 18.90 ಕೋಟಿ ರೂ.
- ಇಸ್ರೋ- 15.55 ಕೋಟಿ ರೂ.
- ವಿಧಾನಸೌಧ, ವಿಕಾಸ ಸೌಧ- 6.64 ಕೋಟಿ ರೂ.
- ಎಂಎಸ್ ಬಿಲ್ಡಿಂಗ್- 3.38 ಕೋಟಿ ರೂ.
- ಪೊಲೀಸ್ ಇಲಾಖೆ- 21.95 ಲಕ್ಷ
- ರಾಜ್ಯ ಸಶಸ್ತ್ರ ಪೊಲೀಸ್- 22 ಲಕ್ಷ
- ಬಿಎಸ್ ಎನ್ ಎಲ್ – 1.43 ಕೋಟಿ ರೂ.
- ಪಂಚಾಯತ್ ರಾಜ್- 3 ಲಕ್ಷ ರೂ.
- ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ – 4.08 ಕೋಟಿ ರೂ.
- ಆಟೋಮಿಕ್ ಇನ್ ಸ್ಟಿಟ್ಯೂಟ್ -92.01 ಕೋಟಿ ರೂ.
- ಸಿಬಿಇಸಿ -2.73 ಲಕ್ಷ ರೂ.
- ಇಎಸ್ ಐಸಿ- 1.64 ಕೋಟಿ ರೂ.
- ಎಪಿಎಂಸಿ ಮಾರುಕಟ್ಟೆ- 40.85 ಲಕ್ಷ ರೂ.
- pwd 85.56 ಲಕ್ಷ ರೂ.
- ವಾಣಿಜ್ಯ ತೆರಿಗೆ ಇಲಾಖೆ- 54.24 ಲಕ್ಷ ರೂ.
- ಅದಾಯ ತೆರಿಗೆ ಇಲಾಖೆ- 1.22 ಕೋಟಿ ರೂ.
- ಕೆಪಿಸಿಎಲ್- 3.78 ಕೋಟಿ ರೂ.
- ಯುವಜನ ಸಬಲೀಕರಣ- 1.33 ಕೋಟಿ ರೂ.
- ವಿವಿ ಟವರ್- 1.18 ಕೋಟಿ ರೂ. ವಸೂಲಿ ಮಾಡಲಾಗಿದೆ.