ಬೆಂಗಳೂರು: ಪಾರ್ಕಿಂಗ್ ಹೆಸರಿನಲ್ಲಿ ಮತ್ತೆ ಲೂಟಿ ಮಾಡಲು ಬಿಬಿಎಂಪಿ ಮುಂದಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಪಾರ್ಕಿಂಗ್ ಬಗ್ಗೆ ದರ ನಿಗದಿ ಮಾಡಿರುವ ಬಿಬಿಎಂಪಿ, ಸಾರ್ವಜನಿಕರ ಆಕ್ಷೇಪಣೆ ಕರೆದಿದ್ದಾರೆ. ಹೀಗಾಗಿ ಸಾರ್ವಜನಿಕರು 7 ದಿನಗಳಲ್ಲಿ ಪಾರ್ಕಿಂಗ್ ದರಗಳ ಬಗ್ಗೆ ಸಲಹೆ ನೀಡಬಹುದು.
ಗ್ಯಾರಂಟಿ ಯೋಜನೆಗೆ ಹಣ ಸರಿದೂಗಿಸಲು ಪಾರ್ಕಿಂಗ್ ಲೂಟಿಗೆ ಬಿಬಿಎಂಪಿ ನಿಂತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಮನೆ ಮುಂದೆ ನಿಲ್ಲಿಸುವ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ಹಾಕಲು ಪಾಲಿಕೆ ಮುಂದಾಗಿದೆ.
ಹೊಸ UAV ದರಗಳ ಪ್ರಕಾರ 150 ಚದರ ಅಡಿಯ ವಾಹನ ನಿಲ್ದಾಣದ ಲೆಕ್ಕಾಚಾರ ಹೀಗಿದೆ…
10 ತಿಂಗಳುಗಳು x ಪ್ರತಿ ಚದರ ಅಡಿ ದರಕ್ಕೆ ರೂ. 2 ಹಾಗೂ ವರ್ಷಕ್ಕೆ ರೂ. 600.
ವಾಣಿಜ್ಯ ಮತ್ತು ವಸತಿಯೇತರ ಸ್ವತ್ತುಗಳು.
10 ತಿಂಗಳುಗಳು x ಪ್ರತಿ ಚದರ ಅಡಿ ದರಕ್ಕೆ 3 ರೂ. ಹಾಗೂ ವರ್ಷಕಕೆ ವರ್ಷಕ್ಕೆ ರೂ. 1125
ಹಿಂದೆ ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಕಮರ್ಷಿಯಲ್ ಇದ್ದರೆ ಕಮರ್ಷಿಯಲ್ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ವಸತಿ ಇದ್ದರೆ ವಸತಿ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕವನ್ನು ವಸೂಲಿ ಮಾಡಲಾಗುತ್ತಿತ್ತು. ಈಗ ಪಾರ್ಕಿಂಗ್ ಗೆ ಚದರ ಅಡಿ ಲೆಕ್ಕದಲ್ಲಿ ದರ ನಿಗದಿ ಮಾಡಲಾಗುತ್ತಿದೆ.
ನಿಮ್ಮ ಕಾಂಪೌಂಡ್ ನಲ್ಲಿ ನಿಲ್ಲಿಸುವ ವಾಹನಗಳಿಗೂ ದರ ನಿಗದಿ ಮಾಡಲಾಗಿದ್ದು, ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಅಪಾರ್ಟ್‌ಮೆಂಟ್, ಕಮರ್ಷಿಯಲ್ ಕಾಂಪ್ಲೆಕ್ಸ್, ಮಾಲ್ ಸೇರಿದಂತೆ ಎಲ್ಲ ರೀತಿಯ ಕಟ್ಟಡಗಳಿಗೆ ಪಾರ್ಕಿಂಗ್ ದರ ನಿಗದಿ ಮಾಡಲಾಗಿದೆ.