ಬೆಂಗಳೂರು: ಕಾನೂನು ಉಲ್ಲಂಘಿಸಿದವರಿಗೆ ರಕ್ಷಣೆ ನೀಡಲು ಸದಾ ‘ಸಿದ್ದ’ ಸರ್ಕಾರ ಎಂದು ಬಿಜೆಪಿಯು ಸಾಮಾಜಿಕ ಜಾಲತಾಣತಲ್ಲಿ ವ್ಯಂಗ್ಯ ಚಿತ್ರವೊಂದನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದೆ.
ನಾಗಮಂಗಲದಲ್ಲಿ ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್. ನಾವು ಬೆಂಕಿ ಹಚ್ಚಿದವರನ್ನು ಬಂಧಿಸಲ್ಲ, ಅದನ್ನು ವಿರೋಧಿಸುವವರನ್ನು ಮಾತ್ರ ಬಂಧಿಸೋದು ಎಂದು ಹೇಳುವ ಬರಹದ ವ್ಯಂಗ್ಯ ಚಿತ್ರವನ್ನು ಚಿತ್ರಿಸಿ ಪೋಸ್ಟ್ ಮಾಡಲಾಗಿದೆ.
ರಾಜ್ಯದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕೋಮುಗಲಭೆ ನಡೆದಿರುವ ಕುರಿತು ವರದಿಯಾಗಿದೆ. ನಾಗಮಂಗಲದಲ್ಲಿ ನಡೆದಿದ್ದ ಘಟನೆ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಕೂಡ ಇಂತಹುದೇ ಘಟನೆ ನಡೆದಿದೆ. ಎರಡೂ ಘಟನೆಗೆ ಸಂಬಂಧಿಸಿದಂತೆ ಹಿಂದೂ ಯುವಕರನ್ನೂ ಅರೆಸ್ಟ್ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿದೆ. ಕಲ್ಲು ಎಸೆದವರನ್ನು ಬಿಟ್ಟು, ಹಿಂದೂ ಯುವಕರನ್ನು ಅರೆಸ್ಟ್ ಮಾಡಲಾಗುತ್ತಿದೆ. ಇದು ಒಂದು ಸಮಾಜದ ಓಲೈಕೆಯ ರಾಜಕಾರಣ ಎಂದು ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ.