ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಪ್ರತಿ ತಿಂಗಳು ಕೊಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ, ಈಗ ಜನರಿಗೆ ಮೋಸ ಮಾಡುತ್ತಿವೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಚಿಂತಾಮಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಗ್ಯಾರಂಟಿಗಳನ್ನು ನೀಡಿ ಎಂದು ಕೇಳಿರಲಿಲ್ಲ. ಕಾಂಗ್ರೆಸ್ ನಾಯಕರಿಗೆ ಆತ್ಮಸಾಕ್ಷಿ ಇದ್ದರೆ ಕೊಟ್ಟ ಮಾತು ಉಳಿಸಿಕೊಳ್ಳಲಿ. ಗೃಹಲಕ್ಷ್ಮಿ ಯೋಜನೆಯ ಹಣ ಮೂರು ತಿಂಗಳಿಗೊಮ್ಮೆ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಉಪ ಮುಖ್ಯಮಂತ್ರಿಗಳೇ ಪ್ರತಿ ತಿಂಗಳು ಗ್ಯಾರಂಟಿ ಯೋಜನೆ ಅನುಷ್ಠಾನ ಆಗಲ್ಲ ಎಂದಿದ್ದರು. ಯಾವಾಗ ಆಗುತ್ತದೆಯೋ ಅವಾಗ ಹಾಕುತ್ತೇವೆ ಎಂದಿದ್ದಾರೆ. ಗ್ಯಾರಂಟಿ ಯೋಜನೆಗಳು ಸರಿಯಾಗಿ ಅನುಷ್ಠಾನ ಆಗಬೇಕು ಎಂದರೆ ಎಂಪಿ ಚುನಾವಣೆ, ಎಂಎಲ್ಎ ಚುನಾವಣೆ ಬರಬೇಕು. ನಮ್ಮ ಉಪ ಚುನಾವಣೆಯಲ್ಲಿ ಗ್ಯಾರಂಇ ಹಣ ಹಾಕಿ ಜನರನ್ನು ಯಾಮಾರಿಸಿದ್ದರು ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಂದೆ ತಾಲ್ಲೂಕು ಜಿಲ್ಲಾಪಂಚಾಯ್ತಿ ಚುನಾವಣೆ ಬಂದಾಗ ಹಣ ಹಾಕಿ ಜನರನ್ನು ಯಾಮಾರಿಸುತ್ತಾರೆ. ಕಾಂಗ್ರೆಸ್ ಸರ್ಕಾರದ ಡ್ರಾಮ ಬಹಳ ದಿನ ನಡೆಯುವುದಿಲ್ಲ. ರಾಜ್ಯದ ಜನ ಛೀ… ಥೂ.. ಎಂದು ಉಗಿಯುತ್ತಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.



















