ಅಧಿಕಾರದ ಹಂಚಿಕೆ ಒಪ್ಪಂದದ ವಿಚಾರ ನಮ್ಮ ಗಮನಕ್ಕೆ ತಂದು ಮಾಡಿದ್ದರೆ ಇಷ್ಟೆಲ್ಲ ಗೊಂದಲಗಳು ಆಗುತ್ತಿರಲಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಪ್ಪಂದ ಏನಾಗಿದೆ? ಏನು ಆಗಿಲ್ಲ ಎಂಬುವುದು ನಮಗೆ ಗೊತ್ತಿಲ್ಲ. ಅವರವರೇ ಚರ್ಚೆಗಳು ಮಾಡಿ ನಿರ್ಧಾರ ಮಾಡಿಕೊಂಡಿದ್ದರು. ಹೀಗಾಗಿ ಈ ಗೊಂದಲಗಳು ಸೃಷ್ಟಿಯಾದವು. ಈಗ ಗೊಂದಲಗಳು ಬಗೆಹರಿದಂತೆ ಕಾಣುತ್ತಿದೆ. ಈ ವಿಚಾರದಲ್ಲಿ ಅಭಿಪ್ರಾಯ ಹೇಳಲು ಹಿರಿಯರು, ಕಿರಿಯರು ಎಂಬುವುದು ಇರುವುದಿಲ್ಲ ಎಂದಿದ್ದಾರೆ.
ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಅವರು ಈ ಹಿಂದೆಯೂ ಹೇಳಿದ್ದರು. ಈಗಲೂ ಅದನ್ನೇ ಹೇಳಿದ್ದಾರೆ. ಮತ್ತೊಬ್ಬರಿಗೆ ಅವಕಾಶ ಇದೆಯೂ ಎಲ್ಲವೋ ಎಂಬುದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದಿದ್ದಾರೆ.



















