ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಲು ಮುಂದಾಗಿದ್ದಕ್ಕೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ಧರಾಮಯ್ಯನವರಿಗೆ ಕುರ್ಚಿಯ ಅಭದ್ರತೆ ಕಾಡುತ್ತಿದೆ. ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ. ರಕ್ಷಣೆ ನೀಡಲು ಬಂದ ರಕ್ಷಣಾ ಇಲಾಖೆಯವರಿಗೆ ಏಕ ವಚನದಲ್ಲಿ ನಿಂದಿಸಿದ್ದಾರೆ. ಇದು ಸಿದ್ಧರಾಮಯ್ಯ ತುಘಲಕ್ ದರ್ಬಾರ್. ಸಾರ್ವಜನಿಕ ವೇದಿಕೆಯಲ್ಲಿ ಎಸ್ಪಿಗೆ ಅಪಮಾನ ಮಾಡಿದ್ದಾರೆಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯನವರಿಗೆ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟಿಸಲು ನೈತಿಕತೆ ಇಲ್ಲ. ಕಳೆದ ತಿಂಗಳು ಹೊಸಪೇಟೆ ಜಿಲ್ಲಾಧಿಕಾರಿಗೆ ವೇದಿಕೆಯಿಂದ ಕೆಳಗಿಳಿಸಿ ಗೆಟ್ ಔಟ್ ಎಂದಿದ್ದರು. ಈಗ ಮಹಿಳೆಯರಿಗೆ, ಎಸ್ಪಿ, ಡಿಸಿಗೆ ಅಪಮಾನ ಮಾಡಿದ್ದಾರೆ. ಆದ್ದರಿಂದ ಸಿಎಂ ಸಿದ್ಧರಾಮಯ್ಯ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಡಿ.ಕೆ. ಶಿವಕುಮಾರ್ ಬಹಳ ಚಾಣಕ್ಷ ರಾಜಕಾರಣಿ. ಅದಕ್ಕೆ ನಿನ್ನೆ ಸಿದ್ದರಾಯ್ಯನವರ ಹೇಳಿಕೆಯನ್ನು ಬೆಂಬಲಿಸಿಲ್ಲ. ಬಿಜೆಪಿಯವರು ಬಳೆ ತೊಟ್ಟಿಲ್ಲ. ನಿಮ್ಮ ಸರ್ಕಾರ ಪತನವಾಗುವವರೆಗೂ ಹೋರಾಟ ಮಾಡುತ್ತೇವೆ ಎಂದಿದ್ದಾರೆ.



















