ಬೆಂಗಳೂರು: ರೈತರಿಗೆ ಪ್ರಕೃತಿಯ ಮುನಿಸು ಒಂದೆಡೆ ಶಾಕ್ ನೀಡುತ್ತಿದ್ದರೆ, ಮತ್ತೊಂದೆಡೆ ಅವೈಜ್ಞಾನಿಕ ದರ ಅವರನ್ನು ಕಂಗಾಲಾಗಿಸುತ್ತಿರುತ್ತದೆ. ಈ ಮಧ್ಯೆ ಬೆಲೆ ಏರಿಕೆ ಬದುಕನ್ನೇ ಸುಸ್ತು ಮಾಡುವಂತಾಗುತ್ತಿದೆ. ಈಗ ಕೇಂದ್ರ ಸರ್ಕಾರ ಸದ್ದಿಲ್ಲದೆ ಗೊಬ್ಬರ ದರ ಏರಿಕೆ ಮಾಡಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯ 2024ರ ಸೆಪ್ಟೆಂಬರ್ ನಲ್ಲಿ ರಸಗೊಬ್ಬರ ದರ ಬಿಡುಗಡೆ ಮಾಡಲಾಗಿತ್ತು. ಮಾರ್ಚ್ ವರೆಗೂ ಅದನ್ನು ಬದಲಾಯಿಸುವಂತಿಲ್ಲ. ಆದರೆ, ಈಗ ಕೇಂದ್ರ ಸದ್ದಿಲ್ಲದೆ ದರ ಪಟ್ಟಿ ಬಿಡುಗಡೆ ಮಾಡಿದೆ.
ಮುಂಗಾರು ಹಂಗಾಮು ಬರುವುದಕ್ಕಿಂತ ಮುಂಚೆಯೇ ದರ ಏರಿಕೆ ಮಾಡಿ ಜಾಣ ನಡೆಯನ್ನು ಕೇಂದ್ರ ಇಟ್ಟಿದೆ. ಈಗ ಕೇಂದ್ರ ಸರ್ಕಾರ, ಎನ್‌ಪಿಕೆ ಕಾಂಪ್ಲೆಕ್ಸ್ 10:26:26 ಗೊಬ್ಬರ 255 ರೂ., ಎನ್‌ಪಿಕೆ ಕಾಂಪ್ಲೆಕ್ಸ್ 15:15:15 ಗೊಬ್ಬರ 180 ರೂ., ಎನ್.ಪಿ.ಕೆ. ಕಾಂಪ್ಲೆಕ್ 20:20:0:13 ಗೊಬ್ಬರ ಮತ್ತು ಎನ್‌ಪಿಕೆ ಕಾಂಪ್ಲೆಕ್ಸ್ 19:19:19 ಗೊಬ್ಬರ ತಲಾ 75 ರೂ. ಏರಿಕೆಯಾಗಿದೆ. ರಸಗೊಬ್ಬರಗಳ ಮೇಲಿನ ಸಹಾಯಧನ ಕಡಿತವಾಗಿದ್ದರಿಂದಾಗಿ ಮುಂದಿನ ದಿನಗಳಲ್ಲಿ ರಸಗೊಬ್ಬರದ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದದಾರೆ.