ಬೆಂಗಳೂರು: ವಿಪ ಸದಸ್ಯ ಸೂರಜ್ ರೇವಣ್ಣ (MLC Suraj Revanna) ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಚುರುಕುಗೊಂಡಿದೆ. ಯುವಕನೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸ್ತಿರುವ ಸೂರಜ್ ರೇವಣ್ಣರನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ (CID Custody) ನೀಡಿದೆ.
ಹೀಗಾಗಿ ನ್ಯಾಯಾಂಗ ಬಂಧನದಲ್ಲಿದ್ದ ಸೂರಜ್‌ರನ್ನು ಎಂಟು ದಿನದ ಮಟ್ಟಿಗೆ ಸಿಐಡಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಒಂದೆರಡು ದಿನಗಳಲ್ಲಿ ಸೂರಜ್ ರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಹೊಳೆನರಸೀಪುರಕ್ಕೆ ಕರೆದೊಯ್ದು ಮಹಜರು ನಡೆಸುವ ಸಾಧ್ಯತೆ ಇದೆ. ಇನ್ನೊಂದೆಡೆ ಸೂರಜ್ ಪರವಾಗಿ ದೂರು ಕೊಟ್ಟಿದ್ದ ವ್ಯಕ್ತಿ ಇದೀಗ ನಾಪತ್ತೆಯಾಗಿದ್ದಾನೆ. ಫೋನ್ ಸ್ವಿಚ್ ಆಫ್ ಆಗಿದೆ. ಹೀಗಾಗಿ ಪ್ರಕರಣದಲ್ಲಿ ಏನೋ ಟ್ವೀಸ್ಟ್ ಸಿಗಬಹುದು ಎನ್ನಲಾಗುತ್ತಿದೆ.
ಇದಕ್ಕೆ ವ್ಯತಿರಿಕ್ತ ಬೆಳವಣಿಗೆಯೂ ನಡೆದಿದೆ. ತಮ್ಮ ವಿರುದ್ಧ ದೂರು ಕೊಟ್ಟಿದ್ದ ಸೂರಜ್ ಆಪ್ತನ ವಿರುದ್ಧ ಸಂತ್ರಸ್ತ ಕೇಸ್ ಫೈಲ್ ಮಾಡಿದ್ದಾನೆ. ಸೂರಜ್ ಕೃತ್ಯದ ಬಾಯಿಬಿಟ್ರೆ ನಿನ್ನನ್ನು ಮುಗಿಸ್ತಾರೆ ಎಂದು ಸೂರಜ್ ಆಪ್ತ ಬೆದರಿಕೆ ಹಾಕಿದ್ದ. ಮನೆಗೆ ಹೋಗಲು ಬಿಡದೇ ಲಾಡ್ಜ್ ನಲ್ಲಿ ಕೂಡಿಹಾಕಿದ್ದ. ಆತನ ಮೇಲೆ ಕ್ರಮ ಆಗಬೇಕು ಎಂದು ಸಂತ್ರಸ್ತ ದೂರಿನಲ್ಲಿ ಉಲ್ಲೇಖಿಸಿದ್ದಾನೆ.