ಬಳ್ಳಾರಿ: ಪ್ರೀ ವೆಡ್ಡಿಂಗ್(Pre-Wedding) ಫೋಟೋಶೂಟ್ ಮಾಡಲು ಹೋಗಿದ್ದ ಸಂದರ್ಭದಲ್ಲಿ ಕಾರಿನ ಗಾಜು ಒಡೆದು 4 ಲಕ್ಷ ರೂ. ಮೌಲ್ಯದ ಕ್ಯಾಮೆರಾ(Camera) ಹಾಗೂ ಲೆನ್ಸ್(Lense) ಕಳ್ಳತನ ಮಾಡಿರುವ ಘಟನೆಯೊಂದು ವರದಿಯಾಗಿದೆ.
ವಿಜಯನಗರ(Vijayanagara) ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದ ಹಿನ್ನೀರಿನ ಗುಂಡಾ ಫಾರೆಸ್ಟ್ ಹತ್ತಿರ ಈ ಘಟನೆ ನಡೆದಿದೆ. ರಾಯಚೂರಿನ ಮಾನ್ವಿ ಮೂಲದ ಫೋಟೋಗ್ರಾಫರ್ ಹುಮಾಯುನ್ ಎಂಬುವವರಿಗೆ ಸೇರಿದ್ದ ಕಾರಿನಲ್ಲಿರುವ ವಸ್ತುಗಳೇ ಕಳ್ಳತನವಾಗಿವೆ. ಕ್ಯಾಮೆರಾ ಹಾಗೂ ಲೆನ್ಸ್ ಇಟ್ಟಿದ್ದ ಹುಮಾಯುನ್ ಬ್ಯಾಕ್ ವಾಟರ್ ಫೋಟೋಶೂಟ್ ಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಕರಾಮತ್ತು ತೋರಿಸಿದ್ದಾರೆ ಎಂದು ತಿಳಿದು ಬಂದಿದೆ.
ಗಾಜು ಒಡೆದು ಕೆನಾನ್ ಕ್ಯಾಮೆರಾ ಹಾಗೂ 4 ಲಕ್ಷ ರೂ. ಲೆನ್ಸ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.