ವಧುವೊಬ್ಬಳು ಮೊದಲ ರಾತ್ರಿಯೇ ಬಿಯರ್ ಮತ್ತು ಗಾಂಜಾ ಕೇಳಿರುವ ಆಶ್ಚರ್ಯಕರ ಘಟನೆಯೊಂದು ವರದಿಯಾಗಿದೆ.
ವಧು ಇಟ್ಟ ಬೇಡಿಕೆ ಕೇಳಿ ವರ ಬೆಚ್ಚಿ ಬಿದ್ದಿದ್ದನೆ. ಅಲ್ಲದೇ, ವಧುವಿನೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದಾನೆ. ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ಈ ಘಟನೆ ನಡೆದಿದೆ. ವಧು ಬಿಯರ್ ಹಾಗೂ ಗಾಂಜಾ ಕೇಳುತ್ತಿದ್ದಂತೆ ಬೆಚ್ಚಿ ಬಿದ್ದ ವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ನಂತರ ಕುಟುಂಬಸ್ಥರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಮಧ್ಯೆ ಪ್ರವೇಶಿಸಿದ ಪೊಲೀಸರು, ಒಟ್ಟಿಗೆ ಇರುವಂತೆ ದಂಪತಿಗೆ ಹೇಳಿದ್ದಾರೆ. ವರನ ನಿರ್ಧಾರ ದೃಢವಾಗಿತ್ತು, ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ವಧುವಿನ ಅಭ್ಯಾಸ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಸದ್ಯ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ.