ಹುಬ್ಬಳ್ಳಿ: ವ್ಯಕ್ತಿಯೊಬ್ಬ ತನ್ನ ಮಗನ ಕಟಿಂಗ್ ಸರಿ ಮಾಡಿಲ್ಲ ಎಂಬ ಕಾರಣಕ್ಕೆ ಕ್ಷೌರಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಇಲ್ಲಿನ ನವನಗರದಲ್ಲಿ ಈ ಘಟನೆ ನಡೆದಿದೆ. ಹಲ್ಲೆ ಮಾಡಿರುವ ವಿಜಯ್ ಕುಮಾರ್ ಅಪ್ಪಾಜಿ ಹಾಗೂ ಸಹಾಯ ಮಾಡಿದ ಗಣೇಶ್ ಎಂಬುವವರನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ವಿಜಯ್ ಕುಮಾರ್ ಅಪ್ಪಾಜಿ ಅವರ ಮಗ ಕಟಿಂಗ್ ಮಾಡಿಸಲು ಸಲೂನ್ ಗೆ ಹೋಗಿದ್ದ. ಆದರೆ, ಸರಿ ಮಾಡಿಲ್ಲ ಎಂದು ಅಂಗಡಿಗೆ ನುಗ್ಗಿ ಹಲ್ಲೆ ಮಾಡಿದ್ದಾನೆ. ಅಂಗಡಿಯಲ್ಲಿದ್ದ ಮೂವರ ಮೇಲೆ ಆರೋಪಿ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ವಿಜಯಕುಮಾರ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು, ಜೊತೆಗೆ ‘ಅಪ್ಪಾಜಿ’ ಜನಸೇನಾ ಎಂಬ ಸಂಘಟನೆ ಕಟ್ಟಿದ್ದಾನೆ. ಆರೋಪಿಗಳು ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಳಿಯಿರುವ ಲೋರೆಯಲ್ ಕಟಿಂಗ್ ಶಾಪ್ನಲ್ಲಿ ಪ್ರತಿ ಬಾರಿ ವಿಜಯಕುಮಾರ್ ಮಗ ಕಟಿಂಗ್ ಮಾಡಿಸುತ್ತಿದ್ದ. ಕಳೆದ ತಿಂಗಳು 11ರಂದು ಕಟಿಂಗ್ ಮಾಡಿಸಿದ್ದ. ಆದರೆ ಪ್ರತಿ ಬಾರಿ ಕಟಿಂಗ್ ಮಾಡುವ ಹುಡುಗ ಇರಲಿಲ್ಲ.
ಬೇರೆ ಹುಡುಗನೊಬ್ಬ ಕಟಿಂಗ್ ಮಾಡಿದ್ದಾನೆ. ವಿಜಯಕುಮಾರ್ ಮಗ ಮನೆಗೆ ಹೋಗಿ ಕಟಿಂಗ್ ಸರಿ ಆಗಿಲ್ಲ ಎಂದಿದ್ದಾನೆ. ಇದರಿಂದ ರೊಚ್ಚಿಗೆದ್ದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.