ಬೆಂಗಳೂರು: ದಸರಾ ಹಬ್ಬದ ಸಂಭ್ರಮಕ್ಕೆ ಅನಗತ್ಯವಾಗಿ ಕುಡಿಯುವ ನೀರನ್ನು ಪೋಲು ಮಾಡಿದರೆ ನಿಯಮದ ಪ್ರಕಾರ ದಂಡ ವಿಧಿಸಲಾಗುತ್ತದೆ.
ಕಾವೇರಿ ನೀರನ್ನು ಕೇವಲ ಕುಡಿಯುವುದಕ್ಕೆ ಮಾತ್ರ ಅವಕಾಶ ನೀಡಲಾದೆ.ಕುಡಿಯುವ ನೀರನ್ನು ವಾಹನ ಸ್ವಚ್ಚತೆಗೆ, ಕಟ್ಟಡ ನಿರ್ಮಾಣಕ್ಕೆ ಬಳಕೆಗೆ ನಿಷೇಧ ಮಾಡಲಾಗಿದ್ದು, ನೀರು ಪೋಲು ಮಾಡುವರ ವಿರುದ್ದ ಕಾಯ್ದೆ 1964 ರ ಕಲಂ 109 ರಂತೆ 5000 ರೂ. ದಂಡ ವಿಧಿಸಲಾಗುತ್ತದೆ.
ಆಯುಧ ಪೂಜೆ ಹಬ್ಬದ ವೇಳೆ ಹೆಚ್ಚಿನ ಜನ ಕಾವೇರಿ ನೀರಿನಿಂದ ವಾಹನಗಳ ಸ್ವಚ್ಚತೆ ಮಾಡುವ ಸಾಧ್ಯತೆ ಇದ್ದು, ಹೀಗಾಗಿ ಕಾವೇರಿ ನೀರು ಅನ್ಯಬಳಕೆಗೆ ಬಳಸುವರಿಗೆ ದಂಡ ಹಾಕಲು ಜಲಮಂಡಳಿ ತೀರ್ಮಾನ ಮಾಡಿದೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.