ಪ್ರಭಾಸ್…ಟಾಲಿವುಡ್ ಅಂಗಳದ ಅತ್ಯಂತ ಸುರದ್ರೂಪಿ ನಟ. ಸಿನಿಮಾ ಹಿನ್ನಲೆಯ ಕುಟುಂಬದಿಂದಲೇ ಬಂದ ಪ್ರಭಾಸ್ ಇವತ್ತು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದ ಪರಿ ನಿಜಕ್ಕೂ ಎಂಥವರಿಗೂ ಆನುಕರಣೀಯ. ಅದರಲ್ಲೂ ದಕ್ಷಿಣ ಭಾರತದ ಓರ್ವ ನಟ ವಿಶ್ವದಾದ್ಯಂತ ಈ ಪಾಟಿ ಅಭಿಮಾನಿ ದೇವರುಗಳನ್ನು ಸಂಪಾದಿಸಿದ ಉದಾಹರಣೆಗಳಿಲ್ಲ. ಅದರಲ್ಲೂ ಕಳೆದ ಒಂದು ದಶಕದಲ್ಲಿ ಪ್ರಭಾಸ್ ಸಾಗಿದ ಹಾದಿ ಮತ್ತು ಬೆಳೆದ ಗತಿ ಬೇರ್ಯಾವ ನಾಯಕನಿಗೂ ಒಲಿದಿಲ್ಲ ಅನ್ನೋದು ವಿಶೇಷ. ಅದ್ರಲ್ಲೂ ಬಾಹುಬಲಿ ಅನ್ನೋ ಒಂದೇ ಒಂದು ಸಿನಿಮಾ ಉತ್ತರ-ದಕ್ಷಿಣದ ಮನೆ ಮನಗಳಲ್ಲಿ ಪ್ರಭಾಸ್ ನೆಡೆಗಿನ ಪ್ರೀತಿಯನ್ನು ಪೋಷಿಸಿದ್ದು ಅಚ್ಚರಿಯೇ ಸರಿ.
ಬಾಹುಬಲಿ ಬಿಡುಗಡೆಯಾಗಿ ಕಳೆಯುತ್ತಿದೆ ದಶಕ
10 ವರ್ಷದಲ್ಲಿ ಪ್ರಭಾಸ್ ಈ ಎತ್ತರಕ್ಕೇರಿದ್ದು ಹೇಗೆ?
ಸಿನಿ ರಂಗದಲ್ಲಿ ಒಂದು ಮಾತಿದೆ. ಭಾರತದಲ್ಲಿ ಪ್ರತಿ ಶುಕ್ರವಾರ ಓರ್ವ ತಾರೆಯ ಜನ್ಮವಾಗುತ್ತೆ ಅಂತಾ. ಪ್ರತಿ ಶುಕ್ರವಾರ ದೇಶದ ಹತ್ತಾರು ಭಾಷೆಗಳಲ್ಲಿ ಸಿನಿಮಾಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಹೀಗೆ ರಿಲೀಸ್ ಆಗೋ ಸಿನಿಮಾಗಳು ಅದೆಷ್ಟೋ ಜನರನ್ನ ರಾತ್ರೋ ರಾತ್ರಿ ಸೂಪರ್ ಸ್ಟಾರ್ ಪಟ್ಟಕ್ಕೇರಿಸಿದ್ದಿದೆ. ಅಷ್ಟೇ ಅಲ್ಲಾ ಅಷ್ಟೇ ವೇಗವಾಗಿ ಅವರನ್ನ ಪಾತಾಳಕ್ಕೆ ತಳ್ಳಿದ ನಿದರ್ಶನಗಳೂ ಇವೆ. ಆದ್ರೆ, ಪ್ರಭಾಸ್ ವಿಚಾರದಲ್ಲಿ ಮಾತ್ರ, ಕಳೆದೊಂದು ದಶಕ ನಿಜಕ್ಕೂ ಏಳು ಬೀಳಿನದ್ದೇ ಆಗಿದ್ದು ನಿಜವಾದ್ರು, ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ ಗತ್ತು ಬೇರ್ಯಾರಿಗೂ ಬರ್ಲಿಲ್ಲ. ಬಾಹುಬಲಿಯಿಂದ ಬಾಹುಬಲ ಪಡೆದ ಪ್ರಭಾಸ್ ಮುಂದೆ ರಾಧೆ ಶ್ಯಾಮ, ಸಾಹೋ, ಆದಿಪುರುಷ್, ಸಲಾರ್, ಕಲ್ಕಿವರೆಗಿನ ಪ್ರಯಾಣ ಹಿಟ್ ಫ್ಲ್ಯಾಪ್ ಗಳಿಗೆ ಸಾಕ್ಷಿಯಾಗಿರಬಹುದು ಆದ್ರೆ ಅಭಿಮಾನ ಮಾತ್ರ ಕಿಂಚಿತ್ ತಗ್ಗಿಲ್ಲ.
ಪ್ರಭಾಸ್ ಗೆ ರಜಿನಿ, ಕಮಲ್ ಗೆ ದಕ್ಕದ ಸ್ಟಾರ್ ಡಮ್
ರಾಜಾ ಸಾಬ್, ಸ್ಪಿರಿಟ್ ಮೂಲಕ ಹಂಗಾಮಾ
ಬಾಹುಬಲಿ ಬಳಿಕ ಬಂದ ರಾಧೆ ಶ್ಯಾಮ, ಸಹೋ ದೊಡ್ಡ ಮಟ್ಟದ ಸಕ್ಸಲ್ ನೀಡಲಿಲ್ಲ ನಿಜ. ಆದ್ರೆ ಉತ್ತರ ಭಾರತದ ಗಲ್ಲಿ ಗಲ್ಲಿಯಲ್ಲೂ ಪ್ರಭಾಸ್ ಅಭಿಮಾನಿ ಬಳಗ ಹುಟ್ಟಿದ್ದು ಸುಳ್ಳಲ್ಲ. ಅಂದು ಉತ್ತರದಲ್ಲೂ ಪ್ರತಾಪ ಮೆರೆಯೋ ನಿಟ್ಟಿನಲ್ಲಿ ರಜಿನಿಕಾಂತ್, ಕಮಲ್ ಹಾಸನ್ ಮಾಡಿದ ಪ್ರಯತ್ನಗಳಿಗೆ ಈ ಮಟ್ಟದ ಸಾಕಾರತೆ ಸಿಕ್ಕಿರ್ಲಲ್ಲ. ಆದ್ರೆ ಪ್ರಭಾಸ್ ವಿಚಾರದಲ್ಲಿ ಮಾತ್ರ ಇದೆಲ್ಲಾ ಸುಳ್ಳಾಗಿದೆ, ದಕ್ಷಿಣದ ಓರ್ವ ನಟ ಈ ಮಟ್ಟದ ಫ್ಯಾನ್ಸ್ ಗಿಟ್ಟಿಸಿದ ಇತಿಹಾಸ ಅಂತಿದ್ರೆ ಅದು ಪ್ರಭಾಸ್ ಹೆಸರಲ್ಲಿದೆ. ಇನ್ನು ಟ್ರೇಲರ್ ಮೂಲಕವೇ ಕಿಚ್ಚು ಹೊತ್ತಿಸಿರೋ ಪ್ರಭಾಸ್ ರ ರಾಜಾ ಸಾಬ್ ಡಿಸೆಂಬರ್ ನಲ್ಲಿ ತೆರೆಗೆ ಅಪ್ಪಳಿಸಲಿದ್ರೆ, ಸಂದೀಪ್ ರೆಡ್ಡಿ ವಂಗಾ ರ ಸ್ಪಿರಿಟ್ ಭರ್ಜರಿ ಹೈಪ್ ಕ್ರಿಯೇಟ್ ಮಾಡಿದೆ. ಒಟ್ನಲ್ಲಿ ದಕ್ಷಿಣದ ನಟನೋರ್ವ ಉತ್ತರದಲ್ಲೂ ಮನೆ ಮಾತಾಗೋ ಮೂಲಕ ಇತಿಹಾಸ ಸೃಷ್ಟಿಸಿದ ಪ್ರಭಾಸ್ ಮುಂದಿನ ಸಿನಿಮಾಗಳ ಭವಿಷ್ಯದ ಮೇಲೆ ಅವರ ಫ್ಯಾನ್ಸ್ ಗಳ ನಡೆ ತೀರ್ಮಾನವಾಗಲಿದೆ.