25 ವರ್ಷದ ಯುವಕನೊಬ್ಬ 36 ವರ್ಷದ ಆಂಟಿಯ ಹಿಂದೆ ಬಿದ್ದು, ಈಗ ಆ ಪ್ರೀತಿ ಕೊಲೆಯಲ್ಲಿ ಅಂತ್ಯವಾಗಿದೆ.
ಯುವಕ ತಾನು ಪ್ರೀತಿಸುತ್ತಿದ್ದ ಆಂಟಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ನಡೆದಿರುವ ಈ ʻಆಂಟಿ ಪ್ರೀತ್ಸೆʼ ಲವ್ ಸ್ಟೋರಿ ಕೊಲೆಯಲ್ಲಿ ಕೊನೆಯಾಗಿದೆ.
ಸಾಫ್ಟ್ವೇರ್ ಇಂಜಿನಿಯರ್ ಆಗಿರುವ 25 ವರ್ಷದ ಯಶಸ್, ಹರಿಣಿಗೆ ಜಾತ್ರೆಯೊಂದರಲ್ಲಿ ಪರಿಚಿತನಾಗಿದ್ದ. ಆಗ ಇಬ್ಬರು ಫೋನ್ ನಂಬರ್ ಎಕ್ಸ್ಚೇಂಜ್ ಮಾಡಿಕೊಂಡಿದ್ದರು. ಬಳಿಕ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಲವ್ಗೆ ಟರ್ನ್ ಆಗಿತ್ತು. ಅದರಲ್ಲೂ ಇಬ್ಬರು ಕೆಂಗೇರಿಯಲ್ಲೇ ನೆಲೆಸಿದ್ದರಿಂದ ಚಾಟಿಂಗ್, ಡೇಟಿಂಗ್, ಕಾಲಿಂಗ್ ಅಂತಾ ಮತ್ತಷ್ಟು ಹತ್ತಿರವಾಗಿದ್ದರು. ಇದು ಇಬ್ಬರನ್ನೂ ಮತ್ತಷ್ಟು ಬೆಸೆದು.. ದೈಹಿಕ ಸಂಪರ್ಕದವರೆಗೂ ಕೊಂಡೊಯ್ದಿತ್ತು.
ಯಶಸ್ ಸ್ನೇಹಿತನ ಸಂಬಂಧಿಯಾಗಿದ್ದ ಹರಿಣಿ, ಕೆಲ ತಿಂಗಳುಗಳಿಂದ ಒಡನಾಟವನ್ನು ಇನ್ನಷ್ಟು ಹೆಚ್ಚು ಮಾಡಿತ್ತು. ಲವ್ ವಿಷಯ ಮನೆಯವರಿಗೆ ಗೊತ್ತಾಗಿ ಗಲಾಟೆಯೂ ಆಗಿತ್ತು. ಅದಾದ ಬಳಿಕ ಹರಿಣಿ ಪತಿ, ಮೊಬೈಲ್ ಕಸಿದುಕೊಂಡು ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಹೀಗಾಗಿ ಭಯ ಬಿದ್ದ ಹರಿಣಿ, ಯಶಸ್ನಿಂದ ಡಿಸ್ಟೆನ್ಸ್ ಮೆಂಟೇನ್ ಮಾಡಿದ್ದರು. ನಂತರ ಇತ್ತೀಚೆಗೆ ಯಶಸ್ನ್ನ ಸಂಪರ್ಕ ಮಾಡಿದ್ದಳು. ಆಷ್ಟರಲ್ಲಾಗಲೇ ಹರಿಣಿ ನೆನಪಲ್ಲಿ ಯಶಸ್ , ತಲೆ ಕೆಡಿಸಿಕೊಂಡಿದ್ದ.
ಬ್ರೇಕ್ ಅಪ್ ಆದ, ಬಳಿಕವೂ ಯಶಸ್ ಆಂಟಿ ಹರಿಣಿ ಚಿಂತೆಯಲ್ಲೇ ಮುಳುಗಿದ್ದ. ಯಾವಾಗ ಹರಿಣಿ ಫೋನ್ ಕಾಲ್ ಮಾಡಿದ್ದಳೋ, ಇದೇ ಚಾನ್ಸ್ ಅಂತಾ ಕಳೆದ ಶುಕ್ರವಾರ ಯಶಸ್, ಪೂರ್ಣ ಪ್ರಜ್ಙಾ ಲೇಔಟ್ನಲ್ಲಿ ಓಯೋ ರೂಮ್ ಬುಕ್ ಮಾಡಿ ʻಮಾತನಾಡುವುದಿದೆ ಬಾʼ ಅಂತಾ ಕರೆದಿದ್ದಾನೆ. ಯಾರಿಗೂ ತಿಳಿಸದೆ ಮನೆಯಿಂದ ಬಂದ ಹರಿಣಿ, ಯಶಸ್ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ಬಳಿಕ ನನ್ನ ಸಹವಾಸ ಬಿಟ್ಟು ಬಿಡು ಅಂತಾ ಮನವಿ ಮಾಡಿದ್ದಾಳೆ.
ಆಂಟಿ ಹರಿಣಿ ಮಾತಿಗೆ ಸಿಟ್ಟಾದ ಯಶಸ್, ʻನಿನ್ನ ಬಿಟ್ಟಿರೋಕೆ ಆಗಲ್ಲ. ನೀನು ನನಗೆ ಬೇಕು. ಆದರೆ ನೀನು ನನ್ನಿಂದ ಅಂತರ ಕಾಯ್ದುಕೊಳ್ತಿದ್ದೀಯಾ. ನನಗೆ ನೀನು ಸಿಗಲಿಲ್ಲ ಅಂದ್ರೆ ಇನ್ಯಾರಿಗೂ ಸಿಗಬಾರದುʼ ಅಂತಾ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಸದ್ಯ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಆರೋಪಿ ಯಶಸ್ನ್ನ ಪೊಲೀಸರು ಬಂಧಿಸಿದ್ದಾರೆ.