ಬೆಂಗಳೂರು: ‘ಸೈಮಾ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡಿಗರಿಗೆ ಅವಮಾನವಾಗಿರುವ ವಿಚಾರಕ್ಕೆ ದೊಡ್ಡ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ‘ಜಂಭದ ಹುಡುಗಿ’ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟಿ ಪ್ರಿಯಾ ಹಾಸನ್ ಕೂಡ ಸೈಮಾ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ನಟರಿಗೆ ಅವಮಾನ ಮಾಡಿರುವ ಸೈಮಾವನ್ನು ಮೊದಲು ಬ್ಯಾನ್ ಮಾಡಬೇಕು. ಕನ್ನಡದ ನಟರಿಗೆ ಅವಮಾನ ಆಗಿರುವುದನ್ನು ಯಾರೂ ಸಹಿಸಬಾರದು. ಅವಮಾನ ಮಾಡಿರುವ ಸ್ಥಳಕ್ಕೆ ಯಾರೂ ಹೋಗಬಾರದು. ನಮ್ಮ ವ್ಯಕ್ತಿತ್ವವನ್ನು ನಾವೇ ಉಳಿಸಿಕೊಳ್ಳಬೇಕು.
ಆಯೋಜಕರು ಕೂಡ ಯಾವುದೇ ಬೇಧ-ಬಾವ ಮಾಡಬಾರದು. ಹೀಗಾಗಿ ಸ್ಯಾಂಡಲ್ ವುಡ್ ಎಚ್ಚೆತ್ತುಕೊಳ್ಳಬೇಕಿದೆ. ಕನ್ನಡಿಗರನ್ನ ಕಡೆಗಣಿಸಿದ್ದ ಸೈಮಾ ಆಯೋಜಕರು, ಕೊನೆಯದಾಗಿ ಕನ್ನಡಿಗರಿಗೆ ಪ್ರಶಸ್ತಿ ವಿತರಿಸಿದೆ. ಹೀಗಾಗಿ ಕನ್ನಡಿಗರು ಸೈಮಾ ವಿರುದ್ಧ ನಿಲ್ಲಬೇಕು ಎಂದಿದ್ದಾರೆ.