ಮುಂಬಯಿ: ನಟ ಆಮಿರ್ ಖಾನ್ (Aamir Khan) ಹುಟ್ಟು ಹಬ್ಬದ ಸಂಭ್ರಮ ಎರಡು ದಿನಗಳಿಗಿಂತ ಮುಂಚೆಯೇ ಆರಂಭವಾಗಿದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳ ದಂಡು ಆಗಮಿಸುತ್ತಿದೆ.
ಅಮಿರ್ ಖಾನ್ ಹುಟ್ಟು ಹಬ್ಬ ಮಾರ್ಚ್ 14ರಂದು ಇದೆ. ಅಮಿರ್ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಹೀಗಾಗಿ ಆಮಿರ್ ಖಾನ್ ಮನೆಗೆ ಶಾರುಖ್ ಖಾನ್, ಸಲ್ಮಾನ್ ಖಾನ್ (Salman Khan) ಅವರು ಆಗಮಿಸಿದ್ದಾರೆ. ಈ ಮೂವರು ಸೂಪರ್ ಸ್ಟಾರ್ಗಳು ಒಂದೆಡೆ ಸೇರಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಈ ಕುರಿತ ವಿಡಿಯೋ ಈಗ ವೈರಲ್ ಆಗುತ್ತಿದೆ.
ಮುಂಬಯಿನ ಬಾಂದ್ರಾದಲ್ಲಿನ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಗೆ ಆಮಿರ್ ಖಾನ್ ಪಾರ್ಟಿ ನೀಡಿದ್ದಾರೆ. ಮಾರ್ಚ್ 14ರಂದು ಕೂಡ ಅವರು ಚಿತ್ರರಂಗದ ಸ್ನೇಹಿತರಿಗಾಗಿ ಅದ್ದೂರಿ ಔತಣಕೂಟ ಏರ್ಪಡಿಸಲಿದ್ದಾರೆ.