ಬೆಂಗಳೂರಿನ ಸಾದಹಳ್ಳಿಯ ವನದುರ್ಗಾಪರಮೇಶ್ವರಿ ದೇವಿಯ ವಾರ್ಷಿಕೋತ್ಸವ ಕಾರ್ಯಕ್ರಮವು ಜೂ. 20ರಂದು ನಡೆಯಲಿದೆ.
ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವನದುರ್ಗಾ ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಅಂದು ಜರುಗಲಿವೆ. ಅಲ್ಲದೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಂದು ಬೆಳಗ್ಗೆ 9.30ಕ್ಕೆ ಅಮ್ಮನವರಿಗೆ ನವಕ ಪ್ರದಾನ ಹೋಮ, ನವ ಕಲಶಾಭಿಷೇಕ, ಮುನೇಶ್ವರ ಹಾಗೂ ನಾಗದೇವರಿಗೆ ನವಕ ಪ್ರದಾನ ಹೋಮ, ನವ ಕಲಶಾಭಿಷೇಕ, ನಂತರ ಮಹಾ ಪೂಜೆ, ಅನ್ನದ ಪಲ್ಲಪೂಜೆ, ದೇವಿಗೆ ನೃತ್ಯ ದರ್ಶನ, ಚಂಡೆ ಮತ್ತು ಕಟುವಾದ್ಯ ನಡೆಯಲಿದೆ.
ಸಂಜೆ 5.30ಕ್ಕೆ ದೇವಿಗೆ ಪ್ರಸನ್ನ ಪೂಜೆ, ಉತ್ಸವ ಬಲಿ, ರಂಗ ಪೂಜೆ, ನಂತರ ದರ್ಶನ ಹಾಗೂ ನೃತ್ಯ ಸೇವೆ ನಡೆಯಲಿದೆ. ಈ ಕಾರ್ಯಕ್ರಮಗಳು ವೇದಮೂರ್ತಿ ಬೆಳ್ಳಣ್ಣು ವಿಘ್ನೇಶ ಭಟ್ ನೇತೃತ್ವದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ದುರ್ಗಾ ಸೇವಕರಾದ ಬಿ.ಎನ್. ಶ್ರೀಲತ, ಬಿ.ಎಸ್. ನಾಗೇಂದ್ರರಾವ್, ಬಿ.ಎಸ್. ಗೋಪಾಲಕೃಷ್ಣ ಪ್ರಕಟಣೆಯಲ್ಲಿ ಕೋರಿದ್ದಾರೆ.