ಸಿನಿಮಾದಿಂದ ಒಟಿಟಿಗೆ ಬರುವ ತಾರೆಯರು ಇದೀಗ ಭರ್ಜರಿ ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಈ ಹಿಂದೆ, ನವಾಜುದ್ದಿನ್ ಸಿದ್ದಿಕಿ, ಮನೋಜ್ ಬಾಜಪೇಯಿ, ಸೈಫ್ ಅಲಿ ಖಾನ್ ದೊಡ್ಡ ಮೊತ್ತವನ್ನ ಪಡೆದು ಸದ್ದು ಮಾಡಿದ್ದರು. ಆದರೀಗ ಇವರೆಲ್ಲರ ದಾಖಲೆಗಳನ್ನು ಮೀರಿ ನಟ ಶಾಹೀದ್ ಕಪೂರ್ ಸಂಭಾವನೆಯಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.
ಹಾಗಂತ ಶಾಹೀದ್ ಈ ದೊಡ್ಡ ಮೊತ್ತವನ್ನು ಯಾವುದೋ ಹೊಸ ಸಿನಿಮಾಗಾಗಿ ಪಡೆಯುತ್ತಿಲ್ಲ ಎನ್ನುವುದು ಮತ್ತೊಂದು ವಿಶೇಷ. ಈ ಹಿಂದೆ ತಾವೇ ಅಭಿನಯಿಸಿ ಜನ ಮನ್ನಣೆ ಗಳಿಸಿದ್ದ ಫರ್ಜಿ ಒಟಿಟಿ ಸಿರೀಸ್ ನ ಮುಂದುವರಿದ ಭಾಗಕ್ಕೆ ಶಾಹೀದ್ ತಮ್ಮ ವೃತ್ತಿ ಬದುಕಿನ ಅತಿದೊಡ್ಡ ಸಂಭಾವನೆ ಗಿಟ್ಟಿಸಿದ್ದಾರೆ. ರಾಜ್-ಡಿಕೆ ನಿರ್ದೇಶನದ ಫರ್ಜಿಯ ಮುಂದುವರಿದ ಭಾಗ ಈ ವರ್ಷದ ಅಂತ್ಯದಲ್ಲಿ ಚಿತ್ರೀಕರಣ ಆರಂಭಿಸಲಿದೆ.
ಈ ಸಿರೀಸ್ ನಲ್ಲಿ ಅಭಿನಯಿಸಲು ಶಾಹೀದ್ 45 ಕೋಟಿ ಚಾರ್ಜ್ ಮಾಡಿದ್ದಾರೆ. ಈ ಮೂಲಕ ತಮ್ಮ ಅಭಿನಯದ ಸೂಪರ್ ಹಿಟ್ ಸಿನಿಮಾ ಕಬೀರ್ ಸಿಂಗ್ ಗೂ ಹೆಚ್ಚಿನ ಸಂಭಾವನೆ ಪಡೆದಿದ್ದಾರೆ. ಸಾಮಾನ್ಯವಾಗಿ ಶಾಹೀದ್ ಈವರೆಗೂ 25ರಿಂದ 30 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಆದರೆ, ಕಳೆದ ಬಾರಿ ಫರ್ಜಿ ಸಿರೀಸ್ ಸೂಪರ್ ಸಕ್ಸಸ್ ಕಂಡಿರುವ ಬೆನ್ನಲ್ಲೇ ನಮ್ಮ ಸಂಭಾವನೆಯನ್ನೂ ಶಾಹೀದ್ ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲಾ ಬಾಲಿವುಡ್ ನಟನೋರ್ವ ಇಷ್ಟು ದೊಡ್ಡ ಮೊತ್ತದ ಹಣಪಡೆಯೋ ಮೂಲಕ ದಾಖಲೆಯನ್ನೂ ನಿರ್ಮಿಸಿದ್ದಾರೆ. ಫರ್ಜಿಯ ಮುಂದುವರಿದ ಭಾಗ ಮುಂದಿನ ವರ್ಷ ತೆರೆಗೆ ಬರಲಿದೆ.