ವಿಜಯಪುರ: ರಾಜ್ಯದಲ್ಲಿ ನಡೆದಿದ್ದ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್ ಹೀನಾಯ ಸೋಲು ಕಂಡಿದೆ. ಬಿಜೆಪಿಯ ಸೋಲಿನಿಂದ ಕಂಗೆಟ್ಟ ಕಾರ್ಯಕರ್ತರೊಬ್ಬರು ಟಿವಿ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕೋಲ್ಹಾರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲು ಕಂಡಿದ್ದನ್ನು ಸಹಿಸಲಾಗದೆ ಕಾರ್ಯಕರ್ತರು ಈ ರೀತಿ ಮಾಡಿದ್ದಾರೆ. ಅಲ್ಲದೇ, ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಯಕರ ಮಧ್ಯೆ ಇರುವ ಬಿರುಕು ಸೋಲಿಗೆ ಕಾರಣ. ಅವರು ಒಗ್ಗಟ್ಟಾಗಿದ್ದರೆ, ಈ ರೀತಿ ಹೀನಾಯ ಸೋಲು ಆಗುತ್ತಿರಲಿಲ್ಲ. ಹೀಗಾಗಿ ಕೂಡಲೇ ವರಿಷ್ಠರು ಮಧ್ಯೆ ಪ್ರವೇಶಿಸಿ, ಮುಖಂಡರ ಸಭೆ ಕರೆದು, ಗುಂಪುಗಾರಿಕೆಯನ್ನು ಹತೋಟಿಗೆ ತರಬೇಕು. ಇಲ್ಲವಾದರೆ, ಕಾರ್ಯಕರ್ತರು ಹಾಳಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.