ವೀಕೆಂಡ್ ಬಂತು ಅಂದರೆ ಕಿಚ್ಚ ಸುದೀಪ್ ಅವರ ಪಂಚಾಯ್ತಿಗೆ ವೀಕ್ಷಕರು ಕಾಯುತ್ತಾರೆ. ಚೈತ್ರಾ ಕುಂದಾಪುರ ಅವರ ಉಸ್ತುವಾರಿ ಚರ್ಚೆಗೆ ಕಾರಣ ಆಯಿತು. ಈ ವಾರ ಸುದೀಪ್ ಅವರು ಇದರ ಪಂಚಾಯ್ತಿ ಮಾಡಲಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದರ ಬೆನ್ನಲ್ಲೇ ಇನ್ನೊಂದು ಪ್ರೋಮೋ ಔಟ್ ಆಗಿದೆ. ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಮತ್ತು ಚೈತ್ರಾ ಮನೆ ಮಂದಿಗೆ ಫೈಟ್ ಕೊಡುತ್ತಿದ್ದಾರೆ.
ಮೊದಲಿಗೆ ಸುದೀಪ್ ಅವರು ಮನೆಯಲ್ಲಿ ರಿಯಾಕ್ಷನ್ ಹೇಗಿದೆ ಅಂತ ಕೇಳಿದ್ದಾರೆ. ಅದಕ್ಕೆ ಚೈತ್ರಾ ಇದ್ದವರು ಸೂರಜ್ ಹಾಗೂ ಅಶ್ವಿನಿ ಅವರ ರಾಶಿಕಾ ಅವರನ್ನ ಕ್ಯಾಪ್ಟನ್ ಅಂತ ಒಪ್ಪಿಕೊಳ್ಳುತ್ತಿಲ್ಲ ಎಂದರು. ರಜತ್ ಕೂಡ, ಅಶ್ವಿನಿ ಅವರು ತುಂಬಾ ಸುಲಭವಾಗಿ ಬಗೆಹರಿಯುವ ವಿಚಾರವನ್ನ ವರ್ಸ್ಟ್ ಮಾಡಿಬಿಟ್ರು ಎಂದಿದ್ದಾರೆ.
ಇದು ಅಶ್ವಿನಿ ಅವರಿಗೆ ಕೋಪ ತರಿಸಿದೆ. ರಜತ್ ಯಾಕೆ ಇಷ್ಟು ಸ್ಟುಪಿಡ್ ಆಗಿ ಮಾತಾಡ್ತಾ ಇದ್ದಾರೆ ಗೊತ್ತಿಲ್ಲ. ಸುಮ್ಮಸುಮ್ಮನೆ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ರಜತ್ ಹಾಗೂ ಚೈತ್ರಾ ಇಬ್ಬರೂ. ನನ್ನ ತಂಟೆಗೆ ಬರಬಾರದು. ಹೇ ಸುಬ್ಬಿ ಆ ಮುದುಕಿಯನ್ನ ಹೊಡೀತಿನಿ ಕಣೋ ಅಂತಾರೆ. ಬಿಗ್ ಬಾಸ್ ಮನೆಗೆ ಕಂಟೆಸ್ಟ್‌ಗಳನ್ನ ಕರೇಸಿದ್ದೀರಾ ಅಥವಾ ಬೇರೆ ಯಾವುದಾದರೂ ಎಲಿಮೆಂಟ್ ಕರೆಸಿದ್ದೀರಾ? ಸೀಸನ್12ರಲ್ಲಿ ಯಾರೂ ಇವರಷ್ಟು ಕಳಪೆ ಇಲ್ಲ. ನಾನು ಎದೆ ತಟ್ಟುಕೊಂಡು ಹೇಳ್ತೀನಿ ಎಂದಿದ್ದಾರೆ.
ಇದನ್ನೂ ಓದಿ : ಇನ್ಸ್ಟಾದಲ್ಲಿ ಪರಿಚಯವಾದ ಪೊಲೀಸಪ್ಪನ ಜೊತೆ ಗೃಹಿಣಿ ಎಸ್ಕೇಪ್ | ಕಾನ್ಸ್‌ಟೇಬಲ್ ಅಮಾನತು



















