ಫ್ಲವರ್ ಅಲ್ಲಾ ಫೈರ್ ಅಂತಾ ಸಿನಿ ದುನಿಯಾದಲ್ಲಿ ಹೊಸ ಭಾಷ್ಯ ಬರೆದ ಪುಷ್ಪರಾಜ್ ಈಗ ಹೊಸ ಲುಕ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈಗ ನಭೂತೋ ನ ಭವಿಷ್ಯತಿ ಎನ್ನುವಂಥಾ ಮೆಗಾ ಪ್ರೊಜೆಕ್ಟ್ ಗೆ ಕೈ ಹಾಕಿದ್ದಾರೆ ಅಲ್ಲು ಅರ್ಜುನ್.
ಸ್ಟೈಲಿಷ್ ಸ್ಟಾರ್ ಗೆ ಈ ಬಾರಿ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ತಮಿಳಿನ ಖ್ಯಾತ ಪ್ರೊಡಕ್ಷನ್ ಹೌಸ್ ಸನ್ ಪಿಕ್ಚರ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಎ6 ಹೆಸರಿನಲ್ಲಿ ಪೂರ್ವ ತಯಾರಿ ಆರಂಭಿಸಿರೋ ಅಟ್ಲಿ-ಅಲ್ಲು ಜೋಡಿ ಸದ್ಯ ಅಮೆರಿಕದ ಲಾಂಜ್ ಏಂಜಲೀಸ್ ನಲ್ಲಿ ಬೀಡುಬಿಟ್ಟಿದೆ.
ಮಾರ್ವಲ್ ಮಾದರಿ ಸೂಪರ್ ಹೀರೋ ಸಿನಿಮಾ
ಪ್ರತಿ ಸಿನಿಮಾ ಪ್ರಿಯರಿಗೂ ಮಾರ್ವೆಲ್ ಸಿರೀಸ್ ನ ಸೂಪರ್ ಹೀರೋ ಸಿನಿಮಾಗಳು ಗೊತ್ತಿರುತ್ತವೆ. ಅದೇ ಮಾದರಿಯಲ್ಲಿ ಈಗ ಹಾಲಿವುಡ್ ಗೇ ಟಕ್ಕರ್ ಕೊಡುವುತಂಹ ಸಿನಿಮಾವನ್ನು ಅಟ್ಲಿ-ಅಲ್ಲು ಜೋಡಿ ಮಾಡಲು ಮುಂದಾಗುತ್ತಿದೆ.
ಇಂಗ್ಲಿಷ್ ಸಿನಿಮಾಗಳನ್ನು ಮೀರಿಸುತ್ತಾ ಅಲ್ಲು ಆರ್ಭಟ
ಹಾಲಿವುಡ್ ಸೂಪರ್ ಡ್ಯೂಪರ್ ಹಿಟ್ 300, ಸ್ಕೈ ಫಾಲ್, ಲೈಫ್ ಆಪ್ ಪೈ, ಎಕ್ಸ್ ಮನ್, ಮಿಷನ್ ಇಂಪಾಜಿಬಲ್ ನಂಥಾ ಸಿನಿಮಾಗಳಿಗೆ ಕೆಲಸ ಮಾಡಿದ ತಂಡ ಈಗ ಬನ್ನಿಯ ಹೊಸ ಸಿನಿಮಾಗೆ ಹೊಸ ಅವತಾರ ನೀಡಲಿದೆ.
ಲಾಸ್ ಏಂಜಲೀಸ್ ನಲ್ಲಿ ಅಲ್ಲು-ಅಟ್ಲಿ ಜೋಡಿ
ಹೊಸ ಚಿತ್ರದ ಪೂರ್ವತಯಾರಿ ಆರಂಭಿಸಿರುವ ಅಲ್ಲು ಅರ್ಜುನ್ ನಿರ್ದೇಶಕರೊಟ್ಟಿಗೆ ಲಾಸ್ ಏಂಜಲೀಸ್ ತಲುಪಿದ್ದಾರೆ. ಇದರ ಭಾಗವಾಗಿಯೇ ಎನ್ನುವಂತೆ ವಿಡಿಯೋ ರಿಲೀಸ್ ಆಗಿದ್ದು, ಅಲ್ಲು ಅರ್ಜುನ್ ವಿವಿಧ ಮಾದರಿಯ ಸೂಪರ್ ಹಿರೋಗಳ ಮಾಸ್ಕ್ ಗಳನ್ನು ಪ್ರಯೋಗಿಸಿದ್ದು ಕುತೂಹಲ ಹೆಚ್ಚಿಸಿದೆ.