ಮೈಸೂರು: ಚಂದನವನದ ನಟ ಡಾಲಿ ಧನಂಜಯ (Daali Dhananjaya) ಹಾಗೂ ಡಾ. ಧನ್ಯತಾ (Dhanyatha) ವಿವಾಹ ಮೈಸೂರು ವಸ್ತು ಪ್ರದರ್ಶನ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು. ಈಗ ಅಭಿಮಾನಿಗಳಿಗೆ ಮದುವೆಯ ಸಂಭ್ರಮದ ಸಂತಸ ಹಂಚಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಾವಿರಾರು ಜನರು ಬಂದು ಆಶೀರ್ವದಿಸಿದ್ದಾರೆ. ಮೈಸೂರು ಬಾಲ್ಯದ ಗೆಳೆಯರು, ನನ್ನ ಗುರುಗಳು ಬಂದಿದ್ದರು. ಮೈಸೂರಿನಲ್ಲಿ (Mysuru) ನನ್ನ ಮದುವೆ ನಡೆದಿರುವುದು ಸಾರ್ಥಕ ಎನಿಸಿದೆ ಎಂದು ಹೇಳಿದ್ದಾರೆ.
ಮದುವೆ ತುಂಬಾ ಚೆನ್ನಾಗಿ ನಡೆಯಿತು. ಚಿತ್ರರಂಗಕ್ಕೆ ಯಾವಾಗಲೂ ನಾನು ಆಭಾರಿ. ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ತುಂಬಾ ಸಪೋರ್ಟ್ ಸಿಕ್ಕಿದೆ. ಎಲ್ಲರೂ ಖುಷಿ ಪಟ್ಟು ಆಶೀರ್ವದಿಸಿದ್ದಾರೆ ಎಂದು ಹೇಳಿದ್ದಾರೆ.