ಹಾವೇರಿ: ಹಾವೇರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ನವದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಶಿಗ್ಗಾವ್ ತಾಲೂಕ್‌ನ ಕಡಹಳ್ಳಿ ಗ್ರಾಮದ ಸಮೀಪ ಈ ಅಪಘಾತ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಶಿಗ್ಗಾವ್ ಕಡೆಗೆ ಬರುತ್ತಿದ್ದ ವ್ಯಾಗನ್ನಾರ್ ಕಾರು (ನಂ. 63 M 0522) ಮುಂದೆ ಸಾಗುತ್ತಿದ್ದ ಟ್ರಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಕಾರ್ತಿಕ್ ಹೂಗಾರ್ (33) ಹಾಗೂ ಪತ್ನಿ ಐಶ್ವರ್ಯ ಹೂಗಾರ್ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿ ಇದ್ದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಜೋಡಿ ಫೆಬ್ರುವರಿ 13, 2026ರಂದು ವಿವಾಹವಾಗಿದ್ದು, ಮದುವೆಯಾದ ಹೊಸತನದಲ್ಲೇ ನವಲಗುಂದ ಕಾಮಣ್ಣನಿಗೆ ಪೂಜೆ ಸಲ್ಲಿಸಲು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.ಈ ಘಟನೆ ಸಂಬಂಧ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಚಿತ್ರದುರ್ಗ | ಪ್ರಿಯತಮೆಯ ಮೋಸದ ಬಲೆಗೆ ಸಿಕ್ಕಿ ಯುವಕ ಸೂಸೈಡ್



















