ಬೆಂಗಳೂರು : ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಟೂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮನೋಜ್( 21), ಅಭಿ (21), ನವೀನ್( 22)ಮೃತ ವಿದ್ಯಾರ್ಥಿಗಳು. ಈ ಮೂವರು ಬೆಂಗಳೂರಿನ ಆಚಾರ್ಯ ಮತ್ತು ಸಪ್ತಗಿರಿ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದರು ಎಂದು ತಿಳಿದುಬಂದಿದೆ.
ಮೂವರು ನಿನ್ನೆ ರಾತ್ರಿ ಮಳವಳ್ಳಿ ಬಿರಿಯಾನಿಗಾಗಿ ಬೈಕ್ ರೈಡ್ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ. ಸದ್ಯ ಮೃತದೇಹಗಳನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆಸ್ಪತ್ರೆಯ ಮುಂದೆ ಮೃತರ ಸ್ನೇಹಿತರ ಹಾಗೂ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಐಪಿಎಲ್ ಆರಂಭಿಕ ಪಂದ್ಯಗಳಿಗೆ ಹೇಜಲ್‌ವುಡ್ ಅಲಭ್ಯತೆ ಬಗ್ಗೆ ಆ್ಯಂಡಿ ಫ್ಲವರ್ ಹೇಳಿದ್ದೇನು?


















