ಬೆಂಗಳೂರು : ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಟೆನ್ಶನ್ ಇದ್ದೇ ಇರುತ್ತೆ. ದೈನಂದಿನ ಕೆಲಸ ಕಾರ್ಯಗಳಲ್ಲಿ ಟೆನ್ಶನ್, ಮನೆಯಲ್ಲಿ ಟೆನ್ಶನ್, ಆಫೀಸ್‌ನಲ್ಲಿ ಟೆನ್ಶನ್… ಹೀಗೆ ಪಟ್ಟಿ ಮಾಡ್ತಾ ಹೋದ್ರೆ ಫುಲ್ ಟೆನ್ಶನ್‌ನಲ್ಲೇ ದಿನ ಕಳೆದು ಹೋಗುತ್ತೆ.

ಇದೀಗ MNCಯಲ್ಲಿ ಕೆಲಸ ಮಾಡ್ತಿರೋರ ದಿನಚರಿ ಮತ್ತು ಖಾಸಗಿ ಬದುಕನ್ನೇ ಹೈಲೇಟ್ ಮಾಡಿಕೊಂಡು ‘ಟೆನ್ಶನ್ ಟೆನ್ಶನ್’ ಎಂಬ ಕನ್ನಡ ಆಲ್ಬಂ ಸಾಂಗ್ ಬಿಡುಗಡೆಗೆ ಸಜ್ಜಾಗಿದೆ. ಗಿರೀಶ್ ಕೃಷ್ಣಾ ಅಲಿಯಾಸ್ ಚೆರಿತ್ ಸಾಹಿತ್ಯ ಬರೆದು ನಿರ್ದೇಶಿಸಿರುವ ಟೆನ್ಶನ್ ಸಾಂಗ್, ಕರ್ನಾಟಕ ನ್ಯೂಸ್ ಬೀಟ್‌ನ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಹೌದು.. ಸುದ್ದಿವಾಹಿನಿಯಲ್ಲಿ ಆಲ್ಬಂ ಸಾಂಗ್ ಬಿಡುಗಡೆಯಾಗುತ್ತಿರುವುದು ಒಂದು ಹೊಸ ಪ್ರೇರಣೆಗೆ ದಾರಿ ಮಾಡಿಕೊಡ್ತಿದೆ. ಹೊಸ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸೋ ನಿಟ್ಟಿನಲ್ಲೇ ಕರ್ನಾಟಕ ನ್ಯೂಸ್ ಬೀಟ್ ಸುದ್ದಿವಾಹಿನಿ ಈ ಕೆಲಸಕ್ಕೆ ಕೈ ಹಾಕಿದೆ.

ಚೆರಿತ್ 2 ವರ್ಷಗಳ ಪ್ರಯತ್ನಕ್ಕೆ ‘ನಿಲ್ಲಿಸೋಕಾಗಲ್ಲ’ ಮೇಕರ್ಸ್ ಬೆನ್ನಿಗೆ ನಿಂತಿದ್ದಾರೆ. ಇದೇ ಭಾನುವಾರ (ನ.9) ‘ಟೆನ್ಶನ್ ಟೆನ್ಶನ್’ ಸಾಂಗ್ ಬಿಡುಗಡೆಯಾಗ್ತಿದೆ. MNCಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ದಿನಚರಿ, ಕಷ್ಟ-ನಷ್ಟ ಹಾಗೂ ಅವರ ಖಾಸಗಿ ಬದುಕಿನ ಶೈಲಿ ಸಾಂಗ್‌ನಲ್ಲಿದ್ದು, ಐಟಿ-ಬಿಟಿ ಗಮನ ಸೆಳೆಯೋ ಉತ್ಸಾಹದಲ್ಲಿದೆ.
ಇದನ್ನೂ ಓದಿ : ಉಡುಪಿ : ನವೆಂಬರ್ 28ಕ್ಕೆ ಪ್ರಧಾನಿ ಮೋದಿ ಭೇಟಿ.. ಶ್ರೀಕೃಷ್ಣ ಕಾರಿಡಾರ್‌ಗೆ ಮನವಿ



















