ಕಲಬುರಗಿ : ನಿಧಿ ಆಸೆಗಾಗಿ ಕಿಡಿಗೇಡಿಗಳು ದೇವಸ್ಥಾನವನ್ನು ಧ್ವಂಸ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಬಡದಾಳ ಗ್ರಾಮದಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ ನಡೆದಿದೆ.
ಬಸವಣ್ಣ ದೇವಸ್ಥಾನದಲ್ಲಿರುವ ಶಿವಲಿಂಗ, ನಂದಿ, ಹನುಮಾನ ಮೂರ್ತಿಗಳನ್ನು ಧ್ವಂಸಗೊಳಿಸಿರುವ ಕಿಡಿಗೇಡಿಗಳು, ಈ ಮೂರ್ತಿಗಳ ಕೆಳಗೆ ನಾಲ್ಕು ಅಡಿಯಷ್ಟು ಆಳದ ಗುಂಡಿ ತೋಡಿ ನಿಧಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಚಾಲುಕ್ಯರ ಕಾಲದ್ದು ಎನ್ನಲಾಗಿರುವ ಈ ಪುರಾತನ ದೇವಸ್ಥಾನದ ಮೇಲೆ ನಿಧಿಗಳ್ಳರ ಕಣ್ಣು ಬಿದ್ದಿದೆ. ಗರ್ಭಗುಡಿಯಲ್ಲಿನ ಶಿವಲಿಂಗವನ್ನ ಧ್ವಂಸಗೊಳಿಸಿರುವ ಕಿಡಿಗೇಡಿಗಳ ಬಂಧನಕ್ಕೆ ಸ್ಥಳೀಯರು ಆಗ್ರಹಿಸಿದ್ದು, ಪುರಾತನ ಹಿಂದೂ ದೇವಾಲಯಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಇರಾನ್ ಯುದ್ಧದ ವಿಚಾರದಲ್ಲಿ ಜೆ.ಡಿ. ವ್ಯಾನ್ಸ್-ನೆತನ್ಯಾಹು ನಡುವೆ ವಾಗ್ವಾದ.. ಇಸ್ರೇಲ್ ವಿರುದ್ಧ ಅಮೆರಿಕ ಗರಂ!


















