ಬೆಂಗಳೂರು: ಮಳೆಯಿಂದಾಗಿ ಕೆಲವು ದಿನಗಳ ಕಾಲ ತಂಪಾಗಿದ್ದ ಸಿಲಿಕಾನ್ ಸಿಟಿ ಈಗ ಮತ್ತೆ ಬಿಸಿ ಬಿಸಿಯಾಗುತ್ತಿದೆ. ನಗರದಲ್ಲಿ ಇತ್ತೀಚೆಗೆ ಉಷ್ಣಾಂಶ ಏರಿಕೆಯಾಗುತ್ತಿದ್ದು, ಜನ ಉಸ್ಸಪ್ಪ ಎನ್ನುವಂತಾಗಿದೆ.
ಕಳೆದ ಹದಿನೈದು ದಿನಗಳಲ್ಲಿ ನಗರದಲ್ಲಿ ತಾಪಮಾನ ಕಡಿಮೆಯಾಗಿತ್ತು. ಚಂಡಮಾರುತದ ಎಫೆಕ್ಟ್, ಮಳೆಯಿಂದಾಗಿ ತಾಪಮಾನ ಕುಗ್ಗಿತ್ತು. ಆದರೆ, ಇದೀಗ ಮತ್ತೆ ಉಷ್ಣಾಂಶ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಒಂದು ವಾರದಿಂದ ಮಳೆ ಪ್ರಮಾಣದಲ್ಲೂ ಇಳಿಕೆಯಾಗಿದೆ. ಹೀಗಾಗಿ ಮತ್ತೆ ಏರಿಕೆಯತ್ತ ಉಷ್ಣಾಂಶ ಮುಖ ಮಾಡಿದೆ. ಕಳೆದ ವಾರ 28-29ಇದ್ದ ಉಷ್ಣಾಂಶ ಈಗ ಗರಿಷ್ಠವಾಗುತ್ತಿದೆ.
ಇಂದಿನ ಗರಿಷ್ಟ ಹಾಗೂ ಕನಿಷ್ಟ ಉಷ್ಣಾಂಶದ ಪ್ರಮಾಣ
ಬೆಂಗಳೂರು ಸಿಟಿ
ಗರಿಷ್ಟ-31.6
ಕನಿಷ್ಠ-22.2
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಗರಿಷ್ಟ- 32.3
ಕನಿಷ್ಟ-21.6
ಹೆಚ್ಎಎಲ್ ಏರ್ಪೋರ್ಟ್
ಗರಿಷ್ಟ-30.9