‘ಬ್ರಹ್ಮಗಂಟು’ ಕನ್ನಡ ಧಾರಾವಾಹಿಯಲ್ಲಿ ನಟಿಸಿ ಭಾರೀ ಖ್ಯಾತಿ ಗಳಿಸಿದಂತಹ ನಟಿ ಗೀತಾ ಭಾರತಿ ಭಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಳ್ಳೆ ಗಾಯಕಿ ಸಹ ಆಗಿರುವ ಗೀತಾ ಬಿಗ್‌ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿದ್ದರು. ಆ ನಂತರ ಅವರು ಸೋಷಿಯಲ್ ಮಿಡಿಯಾದ್ಯಂತ ಫೇಮಸ್ ಆಗಿದ್ದಷ್ಟೇ ಅಲ್ಲದೆ ಆ್ಯಕ್ಟಿವ್ ಕೂಡಾ ಆಗಿದ್ದರು. ವರ್ಕೌಟ್, ಫಿಟ್ನೆಸ್ ಸಂಬಂಧ ಸುದ್ದಿಯಾದ ನಟಿ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಅಮೃತಧಾರೆ ಧಾರವಾಹಿಯಲ್ಲಿ ನಟಿಸುತ್ತಿದ್ದು, ಸದ್ಯ ಅವರ ಮದುವೆ ಫೋಟೋಸ್ ಎಲ್ಲೆಡೆ ವೈರಲ್ ಆಗಿದೆ.

ಗೀತಾ ಭಾರತಿ ಭಟ್ ಅವರು ಸೈಲೆಂಟ್ ಆಗಿ ವಿವಾಹ ಆಗಿದ್ದು, ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಾ ಇದ್ದಾರೆ. ಅವರ ಮದುವೆ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಕೆಲವರಿಗೆ ಇದು ಅಚ್ಚರಿ ತಂದಿದೆ. ಅವರು ವಿವಾಹ ಆಗಿರುವ ಹುಡುಗ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಲವ್ ಮ್ಯಾರೇಜೋ ಅಥವಾ ಅರೆಂಜ್ ಮ್ಯಾರೆಜೋ ಎಂಬ ಕುತೂಹಲವೂ ಮೂಡಿದೆ. ಈ ಎಲ್ಲಾ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ.
ಗೀತಾ ಭಟ್ ದೇಹದ ವಿಚಾರಕ್ಕೆ ಹಲವು ಬಾರಿ ಅವಮಾನ ಎದುರಿಸಿದ್ದು, ಸಾಕಷ್ಟು ಜನರು ಅವರನ್ನು ಬಾಡಿ ಶೇಮಿಂಗ್ ಮಾಡಿದ್ದರು. ಇದನ್ನು ಗೀತಾ ಭಾರತಿ ಭಟ್ ಅವರು ಸಾಕಷ್ಟು ಬಾರಿ ಖಂಡಿಸಿದ್ದಾರೆ. ಇದು ಸರಿ ಅಲ್ಲ ಎಂದು ಅನೇಕ ಬಾರಿ ನೇರವಾಗಿ ಹೇಳಿದ್ದು ಇದೆ. ಗೀತಾ ಭಾರತಿ ಭಟ್ ಅವರು ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಡಾರ್ಲಿಂಗ್ ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು.
ಇದನ್ನೂ ಓದಿ : ಕಳಚಿದ ಕಾಂಗ್ರೆಸ್‌ನ ಹಿರಿಯ ಕೊಂಡಿ | ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು


















